Advertisement

ಅಮೇಠಿಯಲ್ಲಿ ಮರ್ಯಾದೆ ಉಳಿಸಿಕೊಳ್ಳೋದು ಕಷ್ಟವಾಗಿದೆ: ರಾಹುಲ್‌ ಗೆ ಪ್ರಧಾನಿ ಚಾಟಿ

03:00 PM Apr 15, 2024 | Team Udayavani |

ಲಕ್ನೋ: ಉತ್ತರಪ್ರದೇಶದ ಅಮೇಠಿಯಲ್ಲಿ ಮರ್ಯಾದೆ ಉಳಿಸಿಕೊಳ್ಳುವುದು ಕಷ್ಟವಾಗಿದ್ದರಿಂದ ರಾಹುಲ್‌ ಗಾಂಧಿ ಕೇರಳದ ವಯನಾಡಿಗೆ ಸ್ಥಳಾಂತರಗೊಂಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದು, ಅಲ್ಲಿ ದೇಶ ವಿರೋಧಿಗಳ ಜತೆ ಗೌಪ್ಯವಾಗಿ ಮೈತ್ರಿ ಮಾಡಿಕೊಂಡಿರುವುದಾಗಿ ಆರೋಪಿಸಿದರು.

Advertisement

ಇದನ್ನೂ ಓದಿ:Sapthami Gowda: ‘ಕಾಂತಾರ-1’ ಚಿತ್ರದಲ್ಲಿ ನಟಿಸುತ್ತಾರಾ ಸಪ್ತಮಿ ; ನಟಿ ಹೇಳಿದ್ದೇನು?

ಕೇರಳದ ಮತದಾರರು ಎಲ್‌ ಡಿಎಫ್‌ ಮತ್ತು ಯುಡಿಎಫ್‌ ಬಗ್ಗೆ ಎಚ್ಚರದಿಂದ ಇರಬೇಕು, ಕೇರಳದಲ್ಲಿ ಎಡಪಕ್ಷ ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟುವ ಕಾಂಗ್ರೆಸ್‌ ಪಕ್ಷ ದೆಹಲಿಯಲ್ಲಿ ಮೈತ್ರಿ ಮಾಡಿಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಟೀಕಿಸಿದರು.

ಕಾನೂನು ಬಾಹಿರ ಚಟುವಟಿಕೆಗಳಿಂದ ದೇಶದಲ್ಲಿ ನಿಷೇಧಗೊಂಡಿರುವ ಸಂಘಟನೆ ಜತೆ ಕಾಂಗ್ರೆಸ್‌ ಪಕ್ಷ ರಹಸ್ಯವಾಗಿ ಒಪ್ಪಂದ ಮಾಡಿಕೊಂಡಿದೆ. ಎಲ್‌ ಡಿಎಫ್‌ ಮತ್ತು ಯುಡಿಎಫ್‌ ಆಡಳಿತದಲ್ಲಿ ಕೇರಳ ನಲುಗಿ ಹೋಗಿರುವುದಾಗಿ ಪ್ರಧಾನಿ ಮೋದಿ ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಸೇರಿದಂತೆ ಎನ್‌ ಡಿಎ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಕೇರಳ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ದೂರಿದರು. ಎಡಪಕ್ಷಗಳು ತ್ರಿಪುರಾದಲ್ಲಿರಲಿ, ಪಶ್ಚಿಮಬಂಗಾಳ ಅಥವಾ ಕೇರಳದಲ್ಲಿರಲಿ ಅವರದ್ದು ಎಡವೂ ಅಲ್ಲ ಬಲಪಂಥೀಯವೂ ಅಲ್ಲ ಎಂಬ ನಡವಳಿಕೆ ಹೊಂದಿರುತ್ತಾರೆ ಎಂದು ವ್ಯಂಗ್ಯವಾಡಿದರು.

Advertisement

ಭಾನುವಾರ ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ದೇಶದ ಅಭಿವೃದ್ಧಿಗೆ ಕಟಿಬದ್ಧವಾಗಿರುವುದಾಗಿ “ಸಂಕಲ್ಪ ಪತ್ರ” ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next