ಲಕ್ನೋ: ತನ್ನನ್ನು ಮದುವೆಯಾಗಬೇಕು, ಇಲ್ಲದಿದ್ದರೆ ತುಂಡು ತುಂಡಾಗಿ ಕತ್ತಿರುಸುವುದಾಗಿ 17 ವರ್ಷದ ಬಾಲಕಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮೊಹಮ್ಮದ್ ಫೈಯಾಜ್ ಬಂಧಿತ ಆರೋಪಿ.
ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಫೈಯಾಜ್ ಯಾವಾಗಲು ಹಿಂಬಾಲಿಸುತ್ತಿದ್ದ. ತನ್ನನ್ನು ಮದುವೆಯಾಗಬೇಕೆಂದು ಒತ್ತಾಯಿಸಿದ. ಇದಕ್ಕೆ ಬಾಲಕಿ ನಿರಾಕರಿಸಿ, ಪೋಷಕರಿಗೆ ಮಾಹಿತಿ ನೀಡಿದ್ದಳು. ಅವರು ಆತನಿಗೆ ಬುದ್ಧಿ ಹೇಳಿದ್ದರೂ ಬದಲಾಗಿರಲಿಲ್ಲ.
ಮದುವೆಯಾಗಲು ಒಪ್ಪದಿದ್ದಾಗ ತುಂಡು ತುಂಡಾಗಿ ಕತ್ತರಿಸುವುದಾಗಿ ಧಮಕಿ ಹಾಕಿದ್ದಾನೆ. ಈ ಕುರಿತು ಬಾಲಕಿ ಪೋಷಕರು ಕಾನ್ಪುರ ಪೊಲೀಸರಿಗೆ ದೂರು ನೀಡಿದ್ದಾರೆ.
ಫೈಯಾಜ್ನನ್ನು ಬಂಧಿಸಿರುವ ಪೊಲೀಸರು, ಆತನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.