Advertisement

ಹುಟ್ಟುವ ಮಗುವಿನ ಲಿಂಗ ತಿಳಿಯಲು ಗರ್ಭಿಣಿ ಪತ್ನಿಯ ಹೊಟ್ಟೆ ಸೀಳಿದ 5 ಹೆಣ್ಣುಮಕ್ಕಳ ತಂದೆ !

04:17 PM Sep 20, 2020 | Mithun PG |

ಉತ್ತರಪ್ರದೇಶ: ಹುಟ್ಟುವ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿಯಲು 5 ಹೆಣ್ಣುಮಕ್ಕಳ ತಂದೆಯೊಬ್ಬ ತನ್ನ ಗರ್ಭಿಣಿ ಪತ್ನಿಯ ಹೊಟ್ಟೆಯನ್ನು ಸೀಳಿದ ಪೈಶಾಚಿಕ ಕೃತ್ಯ ಶನಿವಾರ ಸಂಜೆ ಬದೌನ್ ಗ್ರಾಮದಲ್ಲಿ ನಡೆದಿದೆ.

Advertisement

ಉದರ ಕತ್ತರಿಸಿದ ಪರಿಣಾಮ ಗರ್ಭಿಣಿ ಮಹಿಳೆ ಗಂಭೀರ ಗಾಯಗೊಂಡಿದ್ದು, ಬರೇಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯ ಎಸಗಿದಾತನನ್ನು ಪನ್ನಲಾಲ್ ಎಂದು ಗುರುತಿಸಲಾಗಿದೆ. ತನ್ನ ಪತ್ನಿಯ ಹೊಟ್ಟೆ ಸೀಳಿದ ನಂತರವೂ ಆತ ಚೂಪಾದ ಆಯುಧದೊಂದಿಗೆ ಅಲ್ಲೆ ಕುಳಿತಿದ್ದ. ಈತ ನೆಕ್ಪುರ್ ನಿವಾಸಿಯಾಗಿದ್ದು, ಸಿವಿಲ್ ಲೈನ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಇದನ್ನೂ ಓದಿ: ವಿಜಯಪುರ ಮಹಿಳಾ ವಿ.ವಿ. ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಈಗಾಗಲೇ ಎಫ್ ಐಆರ್ ದಾಖಲಿಸಲಾಗಿದ್ದು, ಪನ್ನಲಾಲ್ ನನ್ನು ಬಂಧಿಸಲಾಗಿದೆ. ಘಟನೆಯ ಹಿಂದಿರುವ ಕಾರಣವನ್ನು ಶೀಘ್ರವಾಗಿ ಪತ್ತೆಹಚ್ಚಲಾಗುವುದು ಎಂದು ಚೌಹಾಣ್ ತಿಳಿಸಿದ್ದಾರೆ.

Advertisement

ಮಹಿಳೆಯ ಕುಟುಂಬಸ್ಥರ ಪ್ರಕಾರ, ಪನ್ನಲಾಲ್ ಗಂಡು ಮಗುವಿಗಾಗಿ ಹವಣಿಸುತ್ತಿದ್ದ. ಈಗಾಗಲೇ ಐದು ಹೆಣ್ಣು ಮಕ್ಕಳಾದ್ದರಿಂದ ಈ ಬಾರಿಯ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿಯಲು ದುಷ್ಕೃತ್ಯ ಎಸಗಿದ್ದಾನೆಂದು ಆರೋಪಿಸಿದ್ದಾರೆ.

ಇದನ್ನೂ ಓದಿ:  ಅಬ್ಬಾ ಡೇಂಜರ್‌ ಝೋನ್‌ ದಾಟಿದೆವು! ವಿನಾಶದ ಅಂಚಿನಿಂದ ಪಾರಾದ 73 ಜೀವಿಗಳ ನಿಟ್ಟುಸಿರು

ಸಂತ್ರಸ್ತ ಮಹಿಳೆಯು ಸರಿಸುಮಾರು 7 ತಿಂಗಳ ಗರ್ಭಿಣಿ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next