Advertisement

ಹೃದಯಾಘಾತ: ಮದುವೆ ಸಂಭ್ರಮದಲ್ಲಿ ಕುಣಿಯುವಾಗ ಕುಸಿದು ಬಿದ್ದು ವ್ಯಕ್ತಿ ಸಾವು; ವಿಡಿಯೋ ವೈರಲ್

07:22 PM Nov 29, 2022 | Team Udayavani |

ವಾರಾಣಸಿ: ಇತ್ತೀಚೆಗೆ ಹೃದಯಾಘಾತಗಳು ಸಾಮಾನ್ಯವಾಗಿದೆ. ಸಣ್ಣ ವಯಸ್ಸಿನವರೂ ಕೂಡ ಕಾರ್ಡಿಯಾಕ್‌ ಅರೆಸ್ಟ್‌ ನಂತಹ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಮದುವೆ ಸಂಭ್ರಮದಲ್ಲಿ ವ್ಯಕ್ತಿಯೊಬ್ಬ ಹೀಗೆಯೇ ದುರಂತ ಅಂತ್ಯವಾಗಿದ್ದಾನೆ.

Advertisement

ಉತ್ತರಪ್ರದೇಶದ ವಾರಾಣಸಿ ಮೂಲದ ಮನೋಜ್ ವಿಶ್ವಕರ್ಮ (40) ಎನ್ನುವವರು ಪಿಲ್ಪಾನಿ ​​ಕತ್ರಾ ಬಳಿಯ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಲ್ಲಿ ಸಂಬಂಧಿಕರೊಂದಿಗೆ ಸಂತಸದಲ್ಲಿ ಎರಡು ಹೆಜ್ಜೆ ನೃತ್ಯವನ್ನು ಮಾಡಿದ್ದಾರೆ. ಈ ಖುಷಿಯ ಕ್ಷಣದಲ್ಲಿ ಅದೇನಾಯಿತೋ ಗೊತ್ತಿಲ್ಲ. ಕುಣಿಯುತ್ತಿದ್ದ ಮನೋಜ್  ಒಂದೇ ಬಾರಿ ಕುಸಿದು ಬಿದ್ದಿದ್ದಾರೆ. ಅಕ್ಕಪಕ್ಕದಲ್ಲಿದ್ದವರು ಅವರನ್ನು ಎಬ್ಬಿಸಲು ಪ್ರಯತ್ನಪಟ್ಟಿದ್ದಾರೆ. ಆದರೆ ಕುಸಿದು ಬಿದ್ದ ಮನೋಜ್‌ ಮತ್ತೆ ಏಳಲೇ ಇಲ್ಲ.

ಹೃದಯಾಘಾತದಿಂದ ಮನೋಜ್‌ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ಈ ಘಟನೆ ನ.25 ರಂದು ನಡೆದಿದ್ದು ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಈಗ ವೈರಲ್‌ ಆಗುತ್ತಿದೆ.

ಇಂಥದ್ದೇ ಘಟನೆ ಉತ್ತರ ಪ್ರದೇಶದ ದೇವಗಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದ್ದು,  51 ವರ್ಷದ ವ್ಯಕ್ತಿಯೊಬ್ಬ  ‘ರಾಸ್’( ಮದುವೆಯ ಮುನ್ನ ನಡೆಯುವ ಕಾರ್ಯಕ್ರಮ) ಸಂಭ್ರಮದಲ್ಲಿ ಕುಣಿಯುವಾಗ ಕುಸಿದು ಬಿದ್ದಿದ್ದರು.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next