Advertisement

ಉ.ಪ್ರದೇಶ : ಮದ್ಯ ಸೇವನೆ ತಡೆದ ಪತ್ನಿಯನ್ನು ಗುಂಡಿಟ್ಟು ಕೊಂದ ಪತಿ

05:39 AM Jan 11, 2019 | udayavani editorial |

ಮುಜಫ‌ರನಗರ, ಉತ್ತರ ಪ್ರದೇಶ : ಮದ್ಯ ಸೇವನೆ ತಡೆದ ಪತ್ನಿಯನ್ನು ಪತಿರಾಯ ಗುಂಡಿಟ್ಟು ಕೊಂದ ಘಟನೆ ಉತ್ತರ ಪ್ರದೇಶದ ಶರಣ್‌ಪುರ ಜಿಲ್ಲೆಯ ಬಡಗಾಂವ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಜಡೋದಾ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಮೃತ ಮಹಿಳೆಯನ್ನು ನಿಲೀಮಾ (28) ಎಂದು ಗುರುತಿಸಲಾಗಿದೆ. ಆಕೆಯನ್ನು ತನ್ನ ಪರವಾನಿಗೆ ಇದ್ದ ಪಿಸ್ತೂಲಿನಿಂದ ಗುಂಡಿಟ್ಟು ಕೊಂದ ಪತಿ ಸಂಜೀವ್‌ ಕುಮಾರ್‌ ಘಟನೆಯ ಬಳಿಕ ತಲೆಮರೆಸಿಕೊಂಡಿದ್ದು ಪೊಲೀಸರು ಆತನನ್ನು ಹುಡುಕಾಡುತ್ತಿದ್ದಾರೆ.

ಪೊಲೀಸರು ಕೊಲೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಸಹರಣಪುರ ಎಸ್‌ಎಸ್‌ಪಿ ದಿನೇಶ್‌ ಕುಮಾರ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next