ಬಲ್ಲಿಯಾ(ಉತ್ತರ ಪ್ರದೇಶ) : 2018ರಲ್ಲಿ 16 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ನ್ಯಾಯಾಲಯ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಲೈಂಗಿಕ ಅಪರಾಧಗಳಿಂದ ರಾಹುಲ್ ಸಾಹ್ನಿ ಅವರನ್ನು ಮಕ್ಕಳ ವಿಶೇಷ ರಕ್ಷಣೆ (ಪೊಕ್ಸೊ) ನ್ಯಾಯಾಧೀಶ ಶಿವ ಕುಮಾರ್ ಶಿಕ್ಷೆಗೊಳಪಡಿಸಿದ್ದಾರೆ.
ಓದಿ : ತೈಲ ಬೆಲೆ ಇಳಿಕೆಗೆ ಬ್ರೆಂಟ್ ಕಚ್ಚಾ ತೈಲ ಬೆಲೆ ಏರಿಕೆ ಅಡ್ಡಿಯಾಗುತ್ತಿದೆಯೆ..!?
2018 ರ ಜುಲೈ 1 ರಂದು ಚಿತ್ ಬದ್ ಗಾಂವ್ ಪ್ರದೇಶದ ಒಂದು ಹಳ್ಳಿಯಲ್ಲಿ ನಡೆದಿದೆ. ಬಾಲಕಿಯ ತಂದೆ, ಸಾಹ್ನಿ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಎಫ್ ಐ ಆರ್ ದಾಖಲಿಸಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಪಿಂಗ್ ಟಾಡಾ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 366 (ಅಪಹರಣ) ಮತ್ತು 376 (ಅತ್ಯಾಚಾರ), ಮತ್ತು ಎಸ್ ಸಿ/ಎಸ್ ಟಿ(ದೌರ್ಜನ್ಯ ತಡೆ) ಕಾಯ್ದೆ ಮತ್ತು ಪೊಕ್ಸೊ ಕಾಯ್ದೆಯಡಿ ಎಫ್ ಐ ಆರ್ ದಾಖಲಿಸಲಾಗಿತ್ತು.
ಬಾಲಕಿಯನ್ನು ಅಪಹರಿಸಿದ ಆರೋಪಿಗೆ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ನೀಡುವುದರೊಂದಿಗೆ, ಎಸ್ ಸಿ / ಎಸ್ ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಪೊಕ್ಸೊ ಕಾಯ್ದೆಯಡಿ ಜೀವಾವಧಿ ಶಿಕ್ಷೆ ವಿಧಿಸಲು ಆದೇಶಿಸಿದೆ.
ಓದಿ : ಇಬ್ಬರು ಯುವಕರಿಗೆ ಉಗ್ರರೊಂದಿಗೆ ಸಂಪರ್ಕದ ಶಂಕೆ: ತೀರ್ಥಹಳ್ಳಿಗೆ ಭೇಟಿ ನೀಡಿದ ಎನ್ ಐಎ ತಂಡ