ಅಲಿಗಢ: ಕ್ರಿಕೆಟ್ ವಿಶ್ವಕಪ್ ಟ್ರೋಫಿಯ ಮೇಲೆ ತನ್ನ ಕಾಲುಗಳನ್ನು ಇಟ್ಟಿದ್ದಕ್ಕಾಗಿ ಆಸ್ಟ್ರೇಲಿಯದ ಕ್ರಿಕೆಟಿಗ ಮಿಚೆಲ್ ಮಾರ್ಷ್ ವಿರುದ್ಧ ವ್ಯಕ್ತಿರೊಬ್ಬರು ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ಇಲ್ಲಿ ತಿಳಿಸಿದ್ದಾರೆ.
ಭ್ರಷ್ಟಾಚಾರ ವಿರೋಧಿ ಸೇನೆಯ ಅಧ್ಯಕ್ಷ ಪಂಡಿತ್ ಕೇಶವ್ ದೇವ್ ಅವರು ಅಲಿಘರ್‌ನ ದೆಹಲಿ ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
”ದೂರು ಸ್ವೀಕರಿಸಲಾಗಿದ್ದು, ಇಲ್ಲಿಯವರೆಗೆ ಪ್ರಕರಣವನ್ನು ದಾಖಲಿಸಲಾಗಿಲ್ಲ ಮತ್ತು ಸೈಬರ್ ಸೆಲ್‌ನಿಂದ ವರದಿ ಪಡೆದ ನಂತರವೇ ಮುಂದಿನ ಕಾರ್ಯವಿಧಾನವನ್ನು ಅನುಸರಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಮೃಗಾಂಕ್ ಶೇಖರ್ ಹೇಳಿದ್ದಾರೆ.
ಕೇಶವ್ ದೇವ್ ತಮ್ಮ ದೂರಿನಲ್ಲಿ ಆಸ್ಟ್ರೇಲಿಯ ಕ್ರಿಕೆಟಿಗರು ಭಾರತದ ಜನರನ್ನು ಅವಮಾನಿಸಿದ್ದಾರೆ ಮತ್ತು ಟ್ರೋಫಿಯನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಜೇತ ತಂಡಕ್ಕೆ ಹಸ್ತಾಂತರಿಸಿದ್ದರು.
ಮಾರ್ಷ್ ಪಂದ್ಯದ ನಂತರ ಟ್ರೋಫಿಯ ಮೇಲೆ ತನ್ನ ಕಾಲುಗಳನ್ನು ಇಟ್ಟುಕೊಂಡು ಕುಳಿತಿರುವ ಫೋಟೋ ವೈರಲ್ ಆಗಿದ್ದು ಅನೇಕ ಜನರು ಟೀಕಿಸಿದ್ದು, ಹಲವರು ಸಮರ್ಥಿಸಿಕೊಂಡಿದ್ದಾರೆ.