Advertisement

ಅತ್ಯಾಚಾರವೆಸಗಿ, ಕೃತ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡವ ಅಂದರ್…!

02:04 PM Mar 01, 2021 | Team Udayavani |

ಬಲ್ಲಿಯ(ಯುಪಿ) : ಅಪ್ರಾಪ್ತೆ ಬಾಲಕಿಯ ಮೇಲೆ ಹಿಂಸಾತ್ಮಕವಾಗಿ ಅತ್ಯಾಚಾರವೆಸಗಿ ಕೃತ್ಯವನ್ನು ಚಿತ್ರೀಕರಿಸಿ  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಘಟನೆ ಉತ್ತರ ಪ್ರದೇಶದ ಬಲ್ಲಿಯ ಎಂಬ ಪ್ರದೇಶದಲ್ಲಿ ನಡೆದಿದೆ.

Advertisement

ಸದ್ಯ ಈಗ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿ ಮತ್ತು ಕೃತ್ಯವನ್ನು ಚಿತ್ರೀಕರಿಸಿ ಫೇಸ್ ಬುಕ್ ನಲ್ಲಿ ಹಂಚಿಕೊಂಡ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ : ಕೋವಿಡ್ ಲಾಕ್ ಡೌನ್ ಆಘಾತದಿಂದ ಇನ್ನೂ ಚೇತರಿಕೆಯಾಗಿಲ್ಲ ಹೌಸ್ ಹೋಲ್ಡ್ ಇನ್ ಕಮ್ ..!  

ಕಳೆದ ಒಂದು ವರ್ಷದಿಂದ ನಿರಂತರವಾಗಿ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಚಂದ್ರಮಾ ರಾಜ್ ಭರ್ ಎಂಬ 24 ವಯಸ್ಸಿನ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸುಖಪುರ್ ಸ್ಟೇಷನ್ ಹೌಸ್ ಆಫಿಸರ್ ವೀರೇಂದ್ರ ಯಾದವ್ ಹೇಳಿದ್ದಾರೆ.

ಆರೋಪಿ, ಕೃತ್ಯವನ್ನು ಚಿತ್ರೀಕರಿಸಿ ಫೇಸ್ ಬುಕ್ ಸಾಮಾಜಿಕ ಮಾಧ್ಯಮದಲ್ಲೂ ಕೂಡ ಹಂಚಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

Advertisement

ಸದ್ಯ, ಆರೋಪಿಯನ್ನು ಬಂಧಿಸಿ ಐಪಿಸಿ ಸೆಕ್ಶನ್, ಪೋಕ್ಸೋ (Protection of Children From Sexual Offences (POCSO)  ಕಾಯ್ದೆ ಹಾಗೂ ಐಟಿ ಕಾಯ್ದೆಗಳಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ವಿರೇಂದ್ರ ಯಾದವ್ ಮಾಧ್ಯಮಗಳಿಗೆ ಹೇಳಿದ್ದಾರೆ.

“ಆರೋಪಿ, ನನ್ನ ಮೇಲೆ ಕಳೆದ ಒಂದು ವರ್ಷದಲ್ಲಿ ಹಲವು ಬಾರಿ ಅತ್ಯಾಚಾರವೆಸಗಿದ್ದಲ್ಲದೇ, ಚಿತ್ರಹಿಂಸೆ ನೀಡಿದ್ದಾನೆ. ಇದನ್ನು ಯಾರಲ್ಲಾದರೂ ಹೇಳಿಕೊಂಡರೇ ಭಿಕರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಭಯದಿಂದ ಹೇಳಿಕೊಂಡಿರಲಿಲ್ಲ” ಎಂದು ಅಪ್ರಾಪ್ತೆ ಪೊಲೀಸರಲ್ಲಿ ಹೇಳಿಕೊಂಡಿದ್ದಾಳೆ ಎಂದು ವರದಿಯಾಗಿದೆ.

ಬಾಲಕಿಯನ್ನು ಈಗ ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಪ್ರಕರಣದ ಕುರಿತಾಗಿ ತನಿಖೆ ಮುಂದುವರಿಯುತ್ತದೆ ಎಂದು ಯಾದವ್ ಮಾಹಿತಿ ನೀಡಿದ್ದಾರೆ.

ಓದಿ : ನಿನ್ನೆ ಮದುವೆ.. ಇಂದು ಮುಂಜಾನೆ ಮದುಮಗಳು ಹೃದಯಾಘಾತದಿಂದ ನಿಧನ!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next