ಉತ್ತರ ಪ್ರದೇಶ : ಅಶ್ಲೀಲ ವೀಡಿಯೋಗಳನ್ನು ನೋಡುವವರ ಮೇಲೆ ಈ ರಾಜ್ಯದ ಸರ್ಕಾರ ಇನ್ನು ಮುಂದೆ ನಿಗಾಯಿಡಲಿದೆ.
ಉತ್ತರ ಪ್ರದೇಶದ ಪೊಲೀಸರು 1090 ಸೇವೆಯ ಅಡಿಯಲ್ಲಿ ಅಶ್ಲೀಲ ದೃಶ್ಯಗಳನ್ನು ನೋಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಡಿಜಿ ನೀರಾ ರಾವತ್ ಹೇಳಿದ್ದಾರೆ.
ಓದಿ : ಪ್ರಧಾನಿಯಿಂದ ಭಾರತೀಯ ಸೇನೆಗೆ “ಮೈನ್ ಬ್ಯಾಟಲ್ ಟ್ಯಾಂಕ್ ಮಾರ್ಕ್ -1 ಎ” ಹಸ್ತಾಂತರ
oomuph ಎಂಬ ಕಂಪೆನಿಯನ್ನು ಅಂತರ್ಜಾಲದಲ್ಲಿ ಅಧ್ಯಯನ ಮಾಡಲು ಉತ್ತರ ಪ್ರದೇಶದ ಪೊಲೀಸರು ನೇಮಿಸಿದ್ದಾರೆ. ಇದು ಅಂತರ್ಜಾಲದಲ್ಲಿ ಯಾರು ಹೆಚ್ಚಾಗಿ ಅಶ್ಲೀಲ ದೃಶ್ಯಗಳನ್ನು ಹುಡುಕುತ್ತಾರೆ ಎಂದು ಅಧ್ಯಯನ ಮಾಡಲಿದೆ. ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಇತ್ಯಾದಿ ಪ್ರಕರಣಗಳು ಸಂಭವಿಸಿದಲ್ಲಿ ಯಾರು ಹೆಚ್ಚು ಅಂತರ್ಜಾಲದಲ್ಲಿ ಅಶ್ಲೀಲ ದೃಶ್ಯಗಳನ್ನು ನೋಡುತ್ತಾರೋ, ಅವರನ್ನು ಮೊದಲು ವಿಚಾರಣೆಗೆ ತೆಗೆದುಕೊಳ್ಳಲಾಗುತ್ತದೆ. ಡೇಟಾ ಆಧಾರದ ಮೇಲೆ ಅಪರಾಧಿಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
1090 ತಂಡವು ಯಾರು ಹೆಚ್ಚಾಗಿ ಅಂತರ್ಜಾಲದಲ್ಲಿ ಅಶ್ಲೀಲ ದೃಶ್ಯಗಳ ವೀಕ್ಷಣೆ ಮಾಡುತ್ತಾರೋ ಅವರಿಗೆ ಮೊದಲಿಗೆ ಅಲರ್ಟ್ ಸೂಚನೆಯನ್ನು ನೀಡುತ್ತದೆ. ಎಂದು ಅವರು ತಿಳಿಸಿದ್ದಾರೆ.
ರಾಜ್ಯದ 11.6 ಕೋಟಿ ಅಂತರ್ಜಾಲ ಬಳಕೆದಾರರ ಮೇಲೆ ಕಣ್ಣಿಡಲಿದೆ 1090:
ಒಟ್ಟು ಉತ್ತರ ಪ್ರದೇಶ ರಾಜ್ಯದಲ್ಲಿ 11.6 ಕೋಟಿ ಅಂತರ್ಜಾಲ ಬಳಕೆದಾರಿದ್ದಾರೆ. ಅವರೆಲ್ಲರ ಅಂತರ್ಜಾಲ ಹುಡುಕಾಟದ(Internet Search) ಮೇಲೆ ಇದು ನಿಗಾ ವಹಿಸಲಿದೆ.
ಇನ್ನು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹಿಳಾ ಸುರಕ್ಷತೆಗಾಗಿ ಆರಂಭಿಸಿದ ಮಿಷನ್ ಶಕ್ತಿ ಪವರ್ ಲೈನ್ (1090) ಗೆ ಈ ವ್ಯವಸ್ಥೆ ಮತ್ತಷ್ಟು ಶಕ್ತಿ ತುಂಬಲಿದೆ ಎಂದು ವರದಿಯಾಗಿದೆ.
ಓದಿ : ರಾಜ್ಯದಲ್ಲಿ ಹೆಚ್ಚಿದ ಮೀಸಲಾತಿ ಹೋರಾಟದ ಕಿಚ್ಚು..ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಗುಡುಗು