Advertisement

ಉತ್ತರಪ್ರದೇಶ: ಅತ್ಯಾಚಾರದ ದೂರು ದಾಖಲಿಸಲು ಠಾಣೆಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರ!

12:59 PM May 04, 2022 | Team Udayavani |

ಲಕ್ನೋ: ಅತ್ಯಾಚಾರ ಎಸಗಿರುವ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ಮೇಲೆ ಠಾಣೆಯ ಪ್ರಭಾರ ಠಾಣಾಧಿಕಾರಿ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದ ಲಲಿತ್ ಪುರ್ ನಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಅಂತರ್ ರಾಜ್ಯ ಕಳ್ಳರ ಬಂಧನ: 21 ಲಕ್ಷ ನಗದು ವಶ

13 ವರ್ಷದ ಬಾಲಕಿ ತನ್ನ ಸಂಬಂಧಿ ಜೊತೆ ದೂರು ನೀಡಲು ಠಾಣೆಗೆ ತೆರಳಿದ್ದ ವೇಳೆ ಪ್ರಭಾರ ಠಾಣಾಧಿಕಾರಿ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಠಾಣಾಧಿಕಾರಿ ತಿಲಕ್ ಧಾರಿ ಸರೋಜ್ ಎಂಬಾತನನ್ನು ಅಮಾನತುಗೊಳಿಸಲಾಗಿದ್ದು, ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. ಆರೋಪಿ ಠಾಣಾಧಿಕಾರಿ ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ಮೂರು ಪೊಲೀಸ್ ತಂಡ ರಚಿಸಲಾಗಿದೆ. ಇತರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದೆ.

ಬಾಲಕಿಯ ತಂದೆ ನೀಡಿದ ದೂರಿನ ಪ್ರಕಾರ, ಏಪ್ರಿಲ್ 22ರಂದು ತನ್ನ ಮಗಳನ್ನು ನಾಲ್ವರು ಭೋಪಾಲ್ ಗೆ ಕರೆದೊಯ್ದು ಅಲ್ಲಿ ನಾಲ್ಕು ದಿನಗಳ ಕಾಲ ಅತ್ಯಾಚಾರ ಎಸಗಿದ್ದರು. ನಂತರ ಆರೋಪಿಗಳು ಆಕೆಯನ್ನು ಪೊಲೀಸ್ ಠಾಣೆ ಬಳಿ ಬಿಟ್ಟು ಪರಾರಿಯಾಗಿದ್ದರು. ಬಳಿಕ ಬಾಲಕಿಯನ್ನು ಆರೋಪಿ ಠಾಣಾಧಿಕಾರಿ ಆಕೆಯ ಚಿಕ್ಕಮ್ಮನಿಗೆ ಒಪ್ಪಿಸಿರುವುದಾಗಿ ವರದಿ ತಿಳಿಸಿದೆ.

Advertisement

ಮರುದಿನ ಪೊಲೀಸ್ ಠಾಣೆಯಿಂದ ಘಟನೆ ಬಗ್ಗೆ ಹೇಳಿಕೆ ದಾಖಲಿಸಬೇಕೆಂದು ಕರೆ ಬಂದಿದ್ದು, ಚಿಕ್ಕಮ್ಮ ಬಾಲಕಿಯನ್ನು ಠಾಣೆಗೆ ಕರೆದೊಯ್ದ ಸಂದರ್ಭದಲ್ಲಿ ಠಾಣಾಧಿಕಾರಿ ಅತ್ಯಾಚಾರ ಎಸಗಿರುವುದಾಗಿ ಎಫ್ ಐಆರ್ ನಲ್ಲಿ ವಿವರಿಸಲಾಗಿದೆ. ದೂರಿನಲ್ಲಿ ಬಾಲಕಿಯ ಚಿಕ್ಕಮ್ಮನನ್ನು ಆರೋಪಿ ಎಂದು ಉಲ್ಲೇಖಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next