Advertisement

ಅಮೆರಿಕ ವಿವಿಯಲ್ಲಿ ರೈತನ ಮಗನಿಗೆ ಪ್ರವೇಶ

08:19 AM Jul 16, 2020 | mahesh |

ಲಖೀಂಪುರ್‌ಖೇರಿ: ಉತ್ತರ ಪ್ರದೇಶದ ಲಖೀಂಪುರ್‌ಖೇರಿ ಜಿಲ್ಲೆಯ ಸರಸಾನ್‌ ಗ್ರಾಮದ ರೈತನ ಮಗ ಅನುರಾಗ್‌ ತಿವಾರಿ (18) ಅಮೆರಿಕದ ವಿವಿಯಲ್ಲಿ ಅಧ್ಯಯನ ನಡೆಸಲು ಅರ್ಹತೆ ಪಡೆದಿದ್ದಾನೆ. ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ಫ‌ಲಿತಾಂಶದಲ್ಲಿ ಶೇ.98.2 ಅಂಕ ಗಳಿಸಿದ್ದಾನೆ. ಐವಿ ಲೀಗ್‌ ವಿವಿಯಲ್ಲಿ ಸಂಪೂರ್ಣ ರೀತಿಯಲ್ಲಿ ವಿದ್ಯಾರ್ಥಿ ವೇತನ ಪಡೆದು ಅರ್ಥಶಾಸ್ತ್ರದಲ್ಲಿ ಪದವಿ ಓದಲಿದ್ದಾನೆ. ಸಿಬಿಎಸ್‌ಇ 12ನೇ ತರಗತಿಯಲ್ಲಿ ಅನುರಾಗ್‌ ಗಣಿತ 95, ಇಂಗ್ಲಿಷ್‌ 97, ರಾಜ್ಯ ಶಾಸ್ತ್ರ 99, ಇತಿಹಾಸ ಮತ್ತು ಅರ್ಥಶಾಸ್ತ್ರದಲ್ಲಿ 100 ಅಂಕಗಳನ್ನು ಗಳಿಸಿದ್ದಾನೆ. ಸ್ಕಾಲರ್‌ಶಿಪ್‌ ಅಸೆಸ್‌ಮೆಂಟ್‌ ಪರೀಕ್ಷೆ (ಎಸ್‌ಎಟಿ)ಯಲ್ಲಿ 1,370 ಅಂಕಗಳನ್ನು ಗಳಿಸಿದ್ದಾನೆ. ತನ್ನ ಪರಿಶ್ರಮ ಫ‌ಲ ಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next