ಲಕ್ನೋ: ಉತ್ತರಪ್ರದೇಶದ ಹೈವೋಲ್ಟೆಜ್ ನ ವಿಧಾನಸಭೆ ಚುನಾವಣಾ ಕಣ ರಂಗೇರತೊಡಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶನಿವಾರ ಲೋಕ್ ಕಲ್ಯಾಣ್ ಸಂಕಲ್ಪ ಪಾತ್ರ(ಜನ ಅಭಿವೃದ್ಧಿಯೇ ಮೂಲಮಂತ್ರ) ಹೆಸರಿನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಪಕ್ಷ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದರೆ ಸಣ್ಣ ಮತ್ತು ಹಿಡುವಳಿದಾರ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿರುವ ಬಿಜೆಪಿ, ಯುವಕರಿಗೆ ಲ್ಯಾಪ್ ಟಾಪ್ ವಿತರಿಸುವುದಾಗಿ ಆಫರ್ ನೀಡಿದೆ.
ಉತ್ತರಪ್ರದೇಶ ಅಭಿವೃದ್ಧಿಯ ಪಥದಲ್ಲಿ ಹಿಂದುಳಿದಿದೆ ಎಂದಿರುವ ಶಾ, (ಬಿಹಾರ್, ಮಧ್ಯಪ್ರದೇಶ್, ರಾಜಸ್ತಾನ್, ) ರಾಜ್ಯಗಳು ಅಭಿವೃದ್ಧಿಯಾಗಬೇಕಾಗಿದೆ, ಆದರೆ ಉತ್ತರ ಪ್ರದೇಶ ಆಗಿಲ್ಲ ಎಂದರು.
ಕೇಂದ್ರ ಸರ್ಕಾರ ಉತ್ತರಪ್ರದೇಶಕ್ಕಾಗಿ ಒಂದು ಲಕ್ಷ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ಆದರೆ ಅಭಿವೃದ್ಧಿಯಾಗಿದ್ದು ಎಲ್ಲಿಯೂ ಕಾಣುತ್ತಿಲ್ಲ. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯೂ ಕೂಡಾ ಸಮರ್ಪಕವಾಗಿಲ್ಲ ಎಂದು ಶಾ ಆರೋಪಿಸಿದರು.
ನಾನು ಉತ್ತರಪ್ರದೇಶದ ಮತದಾರರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ, ಒಂದು ಬಾರಿ ನಮಗೆ(ಬಿಜೆಪಿ) ಅವಕಾಶ ಕೊಡಿ, ನಾವು ಯುಪಿಯನ್ನು ಅಭಿವೃದ್ಧಿ ರಾಜ್ಯವನ್ನಾಗಿ ಮಾಡುವ ಭರವಸೆ ನೀಡುವುದಾಗಿ ತಿಳಿಸಿದರು.
ಬಿಜೆಪಿ ಪ್ರಣಾಳಿಕೆಯ ಭರವಸೆ:
*ಕೃಷಿ ಸಾಲ ಮನ್ನಾ
*ಪ್ರತಿ ಮನೆಗೂ ಉಚಿತ ಎಲ್ ಪಿಜಿ ಸಂಪರ್ಕ
*ಮುಂದಿನ 5 ವರ್ಷಗಳಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ 150 ಕೋಟಿ ರೂಪಾಯಿ ಮೀಸಲು
*ಉತ್ತರಪ್ರದೇಶದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಗಣಿಗಾರಿಕೆ ಬಂದ್ ಮಾಡಲು ಸ್ಪೆಷಲ್ ಟಾಸ್ಕ್ ಫೋರ್ಸ್ ರಚನೆ.
*ಪಿಯುಸಿವರೆಗೆ ಉಚಿತ ಶಿಕ್ಷಣ, ಅಧಿಕ ಶ್ರೇಯಾಂಕದ ವಿದ್ಯಾರ್ಥಿಗಳ ಪದವಿ ಶಿಕ್ಷಣವರೆಗಿನ ಫೀಸ್ ಮನ್ನಾ