Advertisement

ಇನ್ ಸ್ಟಾಗ್ರಾಂ ಸಂಪರ್ಕ: ವೈದ್ಯ ದಂಪತಿಯ 16 ವರ್ಷದ ಪುತ್ರಿ ಮೇಲೆ ಅತ್ಯಾಚಾರ

07:35 PM Mar 06, 2023 | Team Udayavani |

ಕಾನ್ಪುರ: ಹುಕ್ಕಾ ಬಾರ್‌ನಲ್ಲಿ ತಂಪು ಪಾನೀಯವನ್ನು ಕುಡಿಸಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ವೈದ್ಯ ದಂಪತಿಯ ಪುತ್ರಿ 16 ವರ್ಷದ ಬಾಲಕಿ ಸಾಮಾಜಿಕ ಮಾಧ್ಯಮ ವೇದಿಕೆ ಇನ್ ಸ್ಟಾಗ್ರಾಂ ನಲ್ಲಿ ಆರೋಪಿಯೊಂದಿಗೆ ಸಂಪರ್ಕ ಹೊಂದಿದ್ದಳು.

Advertisement

ಕಾನ್ಪುರದವನಾದ ವಿನಯ್ ಠಾಕೂರ್ ಮತ್ತು ಇತರ ಏಳು ಜನರ ವಿರುದ್ಧ ಹುಡುಗಿಯ ತಂದೆ ಪ್ರಕರಣ ದಾಖಲಿಸಿದ್ದಾರೆ. ವಿನಯ್ ಠಾಕೂರ್ ಮಾರ್ಚ್ 4 ರಂದು ಕರ್ರಾಹಿಯ ಕೆಫೆಗೆ ಹುಡುಗಿಯನ್ನು ಕರೆಸಿಕೊಂಡು, ಅಲ್ಲಿ ಅವರು ಹುಕ್ಕಾ ಸೇದಿದರು ಎಂದು ತಂದೆಯ ದೂರಿನಲ್ಲಿ ತಿಳಿಸಲಾಗಿದೆ.

ವಿನಯ್ ಬಾಲಕಿಯ ಪಾನೀಯದಲ್ಲಿ ಸ್ವಲ್ಪ ನಿದ್ರಾಜನಕವನ್ನು ಹಾಕಿ, ಅವಳನ್ನು ಹೊರಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ದೂರು ದಾಖಲಾಗಿದೆ.ಬಾಲಕಿಯನ್ನು ಮತ್ತೊಂದು ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದು, ಅಲ್ಲಿ ಆತನ ಏಳು ಮಂದಿ ಸ್ನೇಹಿತರು ಸೇರಿಕೊಂಡು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಾಲಕಿ ಹಲ್ಲೆಗೆ ಪ್ರತಿರೋಧ ವ್ಯಕ್ತಪಡಿಸಿದ್ದು, ಈ ವೇಳೆ ಆರೋಪಿ ಆಕೆಯ ದೇಹದಾದ್ಯಂತ ಕಚ್ಚಿದ್ದಾನೆ. ಬಾಲಕಿ ಮನೆಗೆ ಬಂದು ತನಗಾದ ಕಷ್ಟವನ್ನು ವಿವರಿಸಿದ ನಂತರ ತಂದೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next