Advertisement

ವಾರಾಣಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಯೋಗಿ ಆದಿತ್ಯನಾಥ್ ಅವರಿದ್ದ ಹೆಲಿಕಾಪ್ಟರ್

11:15 AM Jun 26, 2022 | Team Udayavani |

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿದ್ದ ಹೆಲಿಕಾಪ್ಟರ್ ಭಾನುವಾರ ವಾರಾಣಸಿಯಲ್ಲಿ ಪಕ್ಷಿ ದಾಳಿಯಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ.

Advertisement

ಲಖ್ನೋಗೆ ತೆರಳುತ್ತಿದ್ದ ಸಿಎಂ ಯೋಗಿ ವಾರಾಣಸಿಯ ಸರ್ಕ್ಯೂಟ್ ಹೌಸ್ ನಿಂದ ಬೆಳಗ್ಗೆ 8.55ರ ಸುಮಾರಿಗೆ ನಿರ್ಗಮಿಸಿದರು. ಅವರ ಹೆಲಿಕಾಪ್ಟರ್ 9.10 ರ ಸುಮಾರಿಗೆ ಪೊಲೀಸ್ ಲೈನ್ ಹೆಲಿಪ್ಯಾಡ್‌ ನಿಂದ ಹೊರಟು 9.16 ಕ್ಕೆ ತುರ್ತು ಭೂಸ್ಪರ್ಶ ಮಾಡಿತು.

ಘಟನೆಯ ನಂತರ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬೆಳಿಗ್ಗೆ 9.20 ರ ಸುಮಾರಿಗೆ ಸರ್ಕ್ಯೂಟ್ ಹೌಸ್‌ಗೆ ಮರಳಿದರು. ಅವರು ಈಗ ಬಬತ್‌ಪುರ ವಿಮಾನ ನಿಲ್ದಾಣಕ್ಕೆ ತೆರಳಿದ್ದು ಅಲ್ಲಿಂದ ರಾಜ್ಯದ ವಿಮಾನದಲ್ಲಿ ಲಖ್ನೋಗೆ ತೆರಳಲಿದ್ದಾರೆ.

ಇದನ್ನೂ ಓದಿ:“ಇವರ ದ್ರೋಹವನ್ನು ಮರೆಯುವುದಿಲ್ಲ”: ಶಿವಸೇನೆ ಸಚಿವ ಆದಿತ್ಯ ಠಾಕ್ರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next