Advertisement

ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್‌ ವೃತ್ತ ಉದ್ಘಾಟನೆ

09:16 PM Sep 28, 2022 | Team Udayavani |

ಅಯೋಧ್ಯೆ: ಖ್ಯಾತ ಹಿನ್ನೆಲೆ ಗಾಯಕಿ ದಿ. ಲತಾ ಮಂಗೇಶ್ಕರ್‌ ಅವರ 93ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಅವರ ಹೆಸರಿನ ವೃತ್ತವನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಬುಧವಾರ ಉದ್ಘಾಟಿಸಿದರು.

Advertisement

ಅಯೋಧ್ಯೆಯಲ್ಲಿ ಸರಯೂ ನದಿಯ ಪಕ್ಕದಲ್ಲಿ 7.9 ಕೋಟಿ ರೂ. ವೆಚ್ಚದಲ್ಲಿ ಈ ವೃತ್ತ ನಿರ್ಮಿಸಲಾಗಿದೆ.

40 ಅಡಿ ಉದ್ದ ಮತ್ತು 12 ಅಡಿ ಎತ್ತರದ 14 ಟನ್‌ ತೂಕದ ಬೃಹತ್‌ ವೀಣೆಯನ್ನು ವೃತ್ತದ ಮಧ್ಯದಲ್ಲಿ ಸ್ಥಾಪಿಸಲಾಗಿದೆ. ವೀಣೆಯಲ್ಲಿ ಸುಂದರವಾದ ಸರಸ್ವತಿ ಮೂರ್ತಿಯನ್ನು ವಿನ್ಯಾಸ ಮಾಡಲಾಗಿದೆ.

ಪದ್ಮಶ್ರೀ ರಾಮ್‌ ಸುತಾರ್‌ ಅವರು ಎರಡು ತಿಂಗಳ ಅವಧಿಯಲ್ಲಿ ಈ ಬೃಹತ್‌ ವೀಣೆಯನ್ನು ನಿರ್ಮಿಸಿದ್ದಾರೆ.

ಆಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಈ ಯೋಜನೆಯನ್ನು ಕೈಗೊಳ್ಳಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next