Advertisement

ಭೂಗಳ್ಳರ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಿಎಂ ಯೋಗಿ

06:41 PM Dec 04, 2022 | Team Udayavani |

ಗೋರಖಪುರ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಸುಮಾರು 200 ಮಂದಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು ಮತ್ತು ಭೂಗಳ್ಳರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

Advertisement

ಗೋರಖನಾಥ ದೇವಸ್ಥಾನದ ಮಹಂತ್ ದಿಗ್ವಿಜಯ್ ನಾಥ್ ಸ್ಮೃತಿ ಆಡಿಟೋರಿಯಂ ಮುಂದೆ ನಡೆದ ‘ಜನತಾ ದರ್ಶನ’ದಲ್ಲಿ ಮಾತನಾಡಿದ ಆದಿತ್ಯನಾಥ್ ಅವರು ಬಡವರು ಮತ್ತು ನಿರ್ಗತಿಕರಿಗೆ ಮನೆಗಳನ್ನು ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭೂ ಕಬಳಿಕೆ ದೂರುಗಳ ಕುರಿತು ಮುಖ್ಯಮಂತ್ರಿಗಳು, ಅಂತಹ ಪ್ರಕರಣಗಳಲ್ಲಿ ಕಠಿಣ ಕಾನೂನು ಕ್ರಮವನ್ನು ಖಾತ್ರಿಪಡಿಸಲಾಗುವುದು ಮತ್ತು ಅಂತಹ ಕೃತ್ಯಗಳಲ್ಲಿ ತೊಡಗಿರುವವರಿಗೆ ಸೂಕ್ತ ಪಾಠಗಳನ್ನು ನೀಡಬೇಕು ಎಂದು ಹೇಳಿದರು. ‘ಜನತಾ ದರ್ಶನ’ದ ವೇಳೆ ವಸತಿ ಸಮಸ್ಯೆ ಕುರಿತು ಮಹಿಳೆಯೊಬ್ಬರು ಮಾತನಾಡಿದ ನಿಯಮಾನುಸಾರ ತನಗೆ ಮನೆ ನೀಡುವಂತೆ ಹೇಳಿದ ಬಳಿಕ , ಆದಿತ್ಯನಾಥ್ ಅವರು ಜಿಲ್ಲಾಧಿಕಾರಿಗಳಿಗೆ ಆ ಕೂಡಲೇ ಸೂಚನೆ ನೀಡಿದರು.

“ಸಾರ್ವಜನಿಕ ಕಲ್ಯಾಣದ ಕೆಲಸವನ್ನು ಆದ್ಯತೆಯ ಮೇಲೆ ಇರಿಸಿಕೊಳ್ಳಿ ಮತ್ತು ಪ್ರತಿಯೊಬ್ಬ ಸಂತ್ರಸ್ತರ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವುದನ್ನು ಖಚಿತಪಡಿಸಿಕೊಳ್ಳಿ” ಎಂದು ಆದಿತ್ಯನಾಥ್ ಹೇಳಿದರು.

ಯಾವುದೇ ಚಿಕಿತ್ಸೆಗೆ ಹಣದ ಕೊರತೆಯಿಂದ ಯಾವುದೇ ಚಿಕಿತ್ಸೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಅವರು ಈ ವೇಳೆ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next