Advertisement

28 ವರ್ಷದ ಸೊಸೆಯನ್ನೇ ಪ್ರೀತಿಸಿ ಮದುವೆಯಾದ 70 ವರ್ಷದ ಮಾವ.! ರಹಸ್ಯ ಮದುವೆಯ ಫೋಟೋ ವೈರಲ್

03:46 PM Jan 27, 2023 | Team Udayavani |

ಲಕ್ನೋ: 70 ವರ್ಷದ ವೃದ್ಧನೊಬ್ಬ ತನ್ನ ಸೊಸೆಯನ್ನೇ ಪ್ರೀತಿಸಿ ಮದುವೆಯಾಗಿರುವ ಘಟನೆ ಗೋರಖಪುರದ ಛಾಪಿಯಾ ಉಮಾರೋ ಗ್ರಾಮದಲ್ಲಿ ನಡೆದಿದೆ.

Advertisement

70 ವರ್ಷದ ವೃದ್ಧನೊಬ್ಬ ಕೈಲಾಶ್ ಯಾದವ್ ಬರ್ಹಲ್ ಗಂಜ್ ಪೊಲೀಸ್ ಠಾಣೆಯಲ್ಲಿ ಚೌಕಿದಾರನಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 12 ವರ್ಷದ ಹಿಂದೆ ಕೈಲಾಶ್ ಯಾದವ್  ಅವರ ಪತ್ನಿ ಮೃತಪಟ್ಟಿದ್ದು, ಒಂಟಿಯಾಗಿ ಜೀವನವನ್ನು ನಡೆಸುತ್ತಿದ್ದರು.

ತನ್ನ ಮೂರನೇ ಮಗ ಪೂಜಾ(28) ಎನ್ನುವ ಯುವತಿಯನ್ನು ಮದುವೆಯಾಗಿದ್ದ. ವಿಧಿಯಾಟಕ್ಕೆ ಕೈಲಾಶ್‌ ಅವರ ಮೂರನೇ ಮಗ ಮೃತಪಟ್ಟಿದ್ದಾರೆ. ಇದಾದ ಬಳಿಕ ತನ್ನ ಸೊಸೆಯನ್ನು ಬೇರೆ ಮದುವೆ ಮಾಡಿಕೊಟ್ಟು ಕೈಲಾಶ್‌ ತಾವು ಒಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದರು.

ಆದರೆ ಬೇರೆ ಮದುವೆಯಾದ ಕೆಲ ಸಮಯದ ಬಳಕ ಸೊಸೆ ಪೂಜಾಳಿಗೆ ಆ ಕುಟುಂಬ ಇಷ್ಟವಾಗದ ಕಾರಣಕ್ಕೆ, ಗಂಡನನ್ನು ಬಿಟ್ಟು ಮತ್ತೆ ಹಳೆ ಗಂಡನ ಮನೆಗೆ ಬಂದು ವಾಸಿಸಲು ಶುರು ಮಾಡುತ್ತಾರೆ. ಹೀಗೆ ದಿನಗಳು ಹೋಗುತ್ತಿದ್ದಂತೆ 70 ವರ್ಷದ ಕೈಲಾಶ್‌ ರಿಗೆ ತನ್ನ 28 ವರ್ಷದ ಸೊಸೆಯ ಮೇಲೆ ಪ್ರೀತಿ ಹುಟ್ಟುತ್ತದೆ.

ರಹಸ್ಯವಾಗಿಯೇ ಇದನ್ನು ಇಟ್ಟಿದ್ದ ಇಬ್ಬರು ಇತ್ತೀಚೆಗೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆಯ ಫೋಟೋಗಳು ವೈರಲ್‌ ಆಗಿದೆ.

Advertisement

ಸದ್ಯ ಇಬ್ಬರು ಒಪ್ಪಿಕೊಂಡು ಮದುವೆಯಾಗಿರುವ ಕಾರಣ ಈ ಬಗ್ಗೆ ಯಾವ ದೂರು ದಾಖಲಾಗಿಲ್ಲ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next