Advertisement

ಆರ್‌.ಕೆ.ಲಕ್ಷ್ಮಣ್‌ರ ವ್ಯಂಗ್ಯಚಿತ್ರಗಳ ಅನಾವರಣ

11:24 AM Oct 24, 2021 | Team Udayavani |

ಬೆಂಗಳೂರು: ನಗರದ ಎಂ.ಜಿ. ರಸ್ತೆಯ ಭಾರತೀಯ ವ್ಯಂಗಚಿತ್ರ ಗ್ಯಾಲರಿಯಲ್ಲಿ ಖ್ಯಾತ ವ್ಯಂಗಚಿತ್ರಕಾರ ಆರ್‌.ಕೆ.ಲಕ್ಷ್ಮಣ್‌ ಅವರ ಭಿನ್ನ ಶೈಲಿಯ ವ್ಯಂಗ್ಯಚಿತ್ರಗಳ ಅನಾವರಣವಾಗಿದ್ದು ವ್ಯಂಗಚಿತ್ರಪ್ರಿಯರ ಮನಸೆಳೆಯುತ್ತಿದೆ.

Advertisement

ಆರ್‌.ಕೆ.ಲಕ್ಷ್ಮಣ ಅವರ ಜನ್ಮ ಶತಮಾನೋತ್ಸದ ಹಿನ್ನೆಲೆಯಲ್ಲಿ ಭಾರತೀಯ ವ್ಯಂಗಚಿತ್ರಕಾರರ ಸಂಸ್ಥೆ ಈ ಅಪರೂಪದ ವ್ಯಂಗ್ಯಚಿತ್ರ ಪ್ರದರ್ಶನ ಹಮ್ಮಿಕೊಂಡಿದ್ದು ಲಕ್ಷ್ಮಣ್‌ ಅವರ ಅಪರೂಪ ಚಿತ್ರಗಳು ಇಲ್ಲಿವೆ. ಈಗಾಗಲೇ ಆರಂಭವಾಗಿರುವ ಈ ಪ್ರದರ್ಶನ ನ.16ರ ವರೆಗೂ ನಡೆಯಲಿದೆ.

ಇದನ್ನೂ ಓದಿ:-ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಶುಗರ್ ಪೌಡರ್ ಆಗಲಿದೆ ! 

ಲಕ್ಷ್ಮಣ್‌ ಅವರ ರಾಜಕೀಯ ವ್ಯಂಗ್ಯಚಿತ್ರಗಳು, ಯು ಸೆಡ್‌ ಇಟ್‌, ಕ್ಯಾರಿಕೇಚರ್, ಅಪ್ರಕಟಿತ ಡೂಡಲ್‌ಗಳು, ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವ್ಯಂಗ್ಯಚಿತ್ರಗಳು, ಕೊರವಂಜಿ ವ್ಯಂಗ್ಯಚಿತ್ರಗಳು, ತೆನಾಲಿರಾಮನ್‌, ಕೋಲ್ಕತ್ತಾ, ಮಧ್ಯಪ್ರದೇಶ, ಒಡಿಶಾ ಸ್ಕೆಚ್‌ಗಳು ಸೇರಿದಂತೆ ಭಿನ್ನ ಬಗೆಯ ವ್ಯಂಗ್ಯಚಿತ್ರಗಳು ಪ್ರದರ್ಶನದಲ್ಲಿ ಇರಿಸಲಾಗಿದೆ. ಕಾಲೇಜು ವಿದ್ಯಾ ರ್ಥಿಗಳು ಪ್ರದರ್ಶನದ ಮೊದಲ ದಿನ ವೀಕ್ಷಿಸಿದರು ಎಂದು ಭಾರತೀಯ ವ್ಯಂಗಚಿತ್ರಕಾರ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿ.ಜಿ.ನರೇಂದ್ರ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next