Advertisement

ಕೇದಾರನಾಥ ಪ್ರತಿಮೆ ಅನಾವರಣ: ಮೋದಿಗೆ ದೇವೇಗೌಡರ ಪ್ರಶಂಸೆ

07:02 PM Nov 06, 2021 | Team Udayavani |

ಬೆಂಗಳೂರು: ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಪ್ರಧಾನಿಯವರಿಗೆ ಪತ್ರ ಸಹ ಬರೆದಿರುವ ಅವರು, ಶಂಕಾರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶೃಂಗೇರಿ ಶಾರದಾ ಪೀಠದ ಜತೆ ತಮ್ಮ ಒಡನಾಟ ಉಲ್ಲೇಖಿಸಿದ್ದಾರೆ. ಶೃಂಗೇರಿ ಮಠವು ಸರ್ವಧರ್ಮ ಸಮನ್ವಯದ ಸಂಕೇತ ಎಂದು ಬಣ್ಣಿಸಿದ್ದಾರೆ.

ಕೇದಾರನಾಥದಲ್ಲಿ ಅನಾವರಣಗೊಂಡ ಆದಿ ಶಂಕರಾಚಾರ್ಯರ ಪ್ರತಿಮೆ ನೋಡಿ ನಾನು ಭಾವುಕನಾದೆ. ಶೃಂಗೇರಿ ಶಾರದಾಪೀಠದ ಅನುಯಾಯಿ ನಾನು. ಮಹಾನ್‌ ಸಂತ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ನಾಲ್ಕು ಶಕ್ತಿ ಕೇಂದ್ರಗಳಲ್ಲಿ ಶೃಂಗೇರಿಯೂ ಒಂದು ಎಂದಿದ್ದಾರೆ.
ಶೃಂಗೇರಿ ಮಠ ಶತಮಾನಗಳಿಂದಲೂ ಅನೇಕ ರಾಜರು, ಆಡಳಿತಗಾರರಿಗೆ ಅಧ್ಯಾತ್ಮಿಕ ಮಾರ್ಗದರ್ಶನ ನೀಡಿದೆ. ಒಡೆಯರು, ಪೇಶ್ವೆಗಳು, ಕೆಳದಿ ಮತ್ತು ತಿರುವಾಂಗಕೂರು ದೊರೆಗಳು ಮಠದಿಂದ ಪ್ರಯೋಜನ ಪಡೆದಿದ್ದಾರೆ.

ಮೈಸೂರು ರಾಜರುಗಳಾದ ಹೈದರ್‌ ಅಲಿ, ಟಿಪ್ಪು ಸುಲ್ತಾನ್‌ ಹಾಗೂ ಹೈದರಾಬಾದ್‌ನ ನಿಜಾಮರು ಮಠಕ್ಕೆ ಭಕ್ತಿ ಪ್ರದರ್ಶಿಸಿ ಮಾರ್ಗದರ್ಶನ ಪಡೆದಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ವಾಟ್ಸಾಪ್‍ನಿಂದ ಹೊಸ ಫೀಚರ್ ಬಿಡುಗಡೆ: ಏನಿದರ ವೈಶಿಷ್ಟ್ಯ

Advertisement

ಶಂಕರಾಚಾರ್ಯರ ಪ್ರತಿಮೆ ನೋಡಲು ನಾನು ಶೀಘ್ರದಲ್ಲೇ ಕೇದಾರನಾಥಕ್ಕೆ ಭೇಟಿ ನೀಡಲು ಬಯಸುತ್ತೇನೆ. ಪ್ರಮುಖವಾಗಿ ಪ್ರತಿಮೆ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿರುವುದು ಸಂತೋಷದ ವಿಚಾರ. ಪ್ರತಿಮೆಗೆ ಕರ್ನಾಟಕದ ಎಚ್‌.ಡಿ.ಕೋಟೆಯ ಕಪ್ಪು ಶಿಲೆ ಬಳಕೆ ಮಾಡಿರುವುದು ಸಂತಸದ ವಿಷಯ ಎಂದು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next