Advertisement

ಲಸಿಕೆಗೆ ತಿರಸ್ಕಾರ: ನೊವಾಕ್ ಜೊಕೊವಿಕ್ ಸಿನ್ಸಿನಾಟಿಯಲ್ಲೂ ಆಡಲ್ಲ

09:11 PM Aug 13, 2022 | Team Udayavani |

ಸಿನ್ಸಿನಾಟಿ: ಖ್ಯಾತ ಆಟಗಾರ ನೊವಾಕ್ ಜೊಕೊವಿಕ್ಇನ್ನೂ ಕೊರೊನಾ ಸೋಂಕಿಗೆ ಯಾವುದೇ ಲಸಿಕೆ ಹಾಕಿಸಿಕೊಂಡಿಲ್ಲ. ಈ ಕಾರಣಕ್ಕಾಗಿ ಅವರಿಗೆ ಅಮೆರಿಕಕ್ಕೆ ಪ್ರಯಾಣಿಸಲು ಅನುಮತಿ ನೀಡಲಾಗಿಲ್ಲ.

Advertisement

ಹೀಗಾಗಿ ಮುಂದಿನ ವಾರದಿಂದ ಸಿನ್ಸಿನಾಟಿಯಲ್ಲಿ ಆರಂಭವಾಗುವ ಹಾರ್ಡ್‌ಕೋರ್ಟ್‌ ಕೂಟದಿಂದ ಅವರು ಹಿಂದೆ ಸರಿದಿದ್ದಾರೆ. ಇದೇ ಕಾರಣಕ್ಕಾಗಿ ಆ.29ರಿಂದ ನ್ಯೂಯಾರ್ಕ್‌ನಲ್ಲಿ ಪ್ರಾರಂಭವಾಗುವ ವರ್ಷದ ಕೊನೆಯ ಗ್ರ್ಯಾನ್‌ಸ್ಲಾಮ್‌ ಕೂಟವಾದ ಯುಎಸ್‌ ಓಪನ್‌ನಲ್ಲೂ ಅವರು ಆಡಲು ಸಾಧ್ಯವಿಲ್ಲ.

ಸರ್ಬಿಯದ 35ರ ಹರೆಯದ ಜೊಕೊವಿಚ್‌ ಇಷ್ಟರವರೆಗೆ 21 ಗ್ರ್ಯಾನ್‌ಸ್ಲಾಮ್‌ ಕೂಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ಗರಿಷ್ಠ ಗ್ರ್ಯಾನ್‌ಸ್ಲಾಮ್‌ ಗೆದ್ದ ರಫಾಯೆಲ್‌ ನಡಾಲ್‌ ಸಾಧನೆಯನ್ನು ಸಮಗಟ್ಟಲು ಜೊಕೊವಿಚ್‌ ಅವರಿಗಿನ್ನು ಒಂದು ಪ್ರಶಸ್ತಿ ಬೇಕಾಗಿದೆ.

ಕೊರೊನಾ ಸೋಂಕು ಬಾರದಿರಲು ಲಸಿಕೆ ಹಾಕಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಲಸಿಕೆ ಹಾಕದಿದ್ದರೆ ಕೆಲವು ಕೂಟಗಳಲ್ಲಿ ಆಡಲು ಬಿಡದಿದ್ದರೂ ನನಗೇನೂ ಚಿಂತೆಯಲ್ಲ ಎಂದವರು ಹೇಳಿದ್ದಾರೆ. ಈ ಕಾರಣಕ್ಕಾಗಿ ಈ ವರ್ಷದ ಆಸ್ಟ್ರೇಲಿಯನ್‌ ಓಪನ್‌ನಲ್ಲೂ ಅವರು ಆಡಿರಲಿಲ್ಲ. ಮಾತ್ರವಲ್ಲದೇ ಈ ವಾರ ಮಾಂಟ್ರಿಯಲ್‌ನಲ್ಲಿ ನಡೆದ ಕೂಟ ಸಹಿತ ಅಮೆರಿಕದಲ್ಲಿ ಈ ಹಿಂದೆ ನಡೆದ ಎರಡು ಕೂಟಗಳಲ್ಲಿ ಅವರು ಆಡಿರಲಿಲ್ಲ. ಮೂರು ಬಾರಿಯ ಯುಎಸ್‌ ಚಾಂಪಿಯನ್‌ ಆಗಿರುವ ಜೊಕೊವಿಚ್‌ ಕಳೆದ ವರ್ಷ ಡ್ಯಾನಿಲ್‌ ಮೆಡ್ವೆಡೇವ್‌ ಅವರಿಗೆ ಶರಣಾಗಿ ರನ್ನರ್‌ ಅಪ್‌ ಸ್ಥಾನ ಪಡೆದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next