Advertisement

ಅವೈಜ್ಞಾನಿಕ ಕಾಮಗಾರಿ; ಸಮಸ್ಯೆಗಳ ಅನಾವರಣ

05:01 PM Sep 12, 2022 | Team Udayavani |

ಅರಸೀಕೆರೆ: ಇತ್ತೀಚೆಗೆ ನಗರದಲ್ಲಿ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯ ಪರಿಣಾಮ ನಗರಸಭೆ ವ್ಯಾಪ್ತಿಯಲ್ಲಿ ಅನೇಕ ಸಮಸ್ಯೆಗಳು ಉಂಟಾಗಿದ್ದು, ಇದಕ್ಕೆ ನಗರಸಭೆಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅವೈಜ್ಞಾನಿಕ ಅಭಿವೃದ್ಧಿ ಕಾರ್ಯಗಳ ಅನುಷ್ಠಾನವೇ ಮುಖ್ಯ ಕಾರಣವಾಗಿದೆ ಎಂಬುವುದು ಸಾರ್ವಜನಿಕರ ಮುಂದೆ ಅನಾವರಣಗೊಳ್ಳುತ್ತಿವೆ ಎಂದು ನಗರಸಭೆ ಅಧ್ಯಕ್ಷ ಸಿ. ಗಿರೀಶ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಹಾಸನ ರಸ್ತೆಯ ಎರಡು ಬದಿಗಳಲ್ಲಿ ನಿರ್ಮಿಸಿದ್ದ ಚರಂಡಿಗಳಲ್ಲಿ ತುಂಬಿದ ಘನ ತ್ಯಾಜ್ಯಗಳನ್ನು ಜೆಸಿಬಿಯಂತ್ರದ ಮೂಲಕ ತೆಗೆಸಿ ಟ್ರಾಕ್ಟರ್‌ನಿಂದ ಹೊರಸಾಗಿಸುತ್ತಿದ್ದ ವೇಳೆ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ನಗರಸಭೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ಅಧಿಕಾರಿಗಳು ನಿರ್ಮಿಸಿ ರುವ ಒಳಚರಂಡಿ ಕಾಮಗಾರಿಗಳು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ಸರ್ಕಾರದ ಅನುದಾನವನ್ನು ದುರುಪಯೋಗ ಮಾಡಿಕೊಂಡಿದ್ದಾರೇ ಹೊರತು ನಗರದ ಜನತೆ ಎದುರಿಸುತ್ತಾ ಬಂದಿರುವ ಮೂಲಭೂತ ಸಮಸ್ಯೆ ಗಳು ಇಂದಿಗೂ ಬಗೆಹರಿಸದಂತೆ ಜೀವಂತವಾಗಿ ಇರಿಸಿಕೊಂಡಿದ್ದಾರೆ.

ಮುರಿದು ಬಿದ್ದಿರುವ ಸ್ಲ್ಯಾಬ್‌ಗಳು: ಇದೇ ಹಾಸನ ರಸ್ತೆಯ ಎರಡು ಬದಿಯ ಚರಂಡಿಗಳನ್ನು ಸುವ್ಯವಸ್ಥಿತವಾಗಿ ಮಾಡಿ ಅದರ ಮೇಲೆ ದಪ್ಪನೆ ಚಪ್ಪಡಿ ಕಲ್ಲುಗಳನ್ನು ಹಾಕಲಾಗಿತ್ತು. ಚರಂಡಿ ಒಳಗೆ ಮಳೆಯ ನೀರು ಹೊರತು ಬೇರೆ ಯಾವುದೇ ಘನ ತ್ಯಾಜ್ಯಗಳು ಚರಂಡಿ ಸೇರುತ್ತಿರಲ್ಲಿಲ್ಲ. ಆದರೆ ಕಳೆದ 10 ವರ್ಷಗಳ ಹಿಂದೆ ನಗರಸಭೆ ಚುನಾಯಿತ ಜನಪ್ರತಿನಿಧಿಗಳು ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ಚರಂಡಿ ಮೇಲಿನ ಚಪ್ಪಡಿ ಕಲ್ಲುಗಳನ್ನು ತೆಗೆ ದು ಕಳಪೆ ಗುಣ ಮಟ್ಟದ ಸಿಮೆಂಟ್‌ ಸ್ಲಾಬ್‌ಗಳನ್ನು ಜೋಡಿಸಿದ ಪರಿಣಾಮ ಒಂದೇ ವರ್ಷದಲ್ಲಿ ಹಲವಾರು ಸಿಮೆಂಟ್‌ ಸ್ಲಾಬ್‌ಗಳು ಮುರಿದು ಬಿದ್ದಿವೆ.

ರಸ್ತೆಗಳು ಜಲಾವೃತ: ಚರಂಡಿಗಳಲ್ಲಿ ಘನ ತ್ಯಾಜ್ಯ ತುಂಬಿ ಕೊಂಡಿರುವ ಪರಿಣಾಮ ಮಳೆಯ ನೀರು ಸರಾಗವಾಗಿ ಮುಂದೆ ಸಾಗಲು ಸಾಧ್ಯವಾಗದೇ ರಸ್ತೆಯ ಮೇಲ್ಭಾಗದಲ್ಲಿ ಹರಿಯುವ ಕಾರಣ ಕೃತಕವಾದ ಹೊಳೆಯೇ ಸೃಷ್ಟಿಸಿದಂತಾ ಗುತ್ತಿದೆ. ಇದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ರೀತಿಯಲ್ಲಿ ತೊಂದರೆ ಉಂಟಾಗುತ್ತಿದೆ. ಅಲ್ಲದೆ ರೈಲ್ವೆ ಕಾಲೋನಿಗಳಲ್ಲಿ ಹರಿಯುವ ಮಳೆಯ ನೀರು ಈ ಜಾಗದಲ್ಲಿ ಮುಂದೆ ಸಾಗುವ ಪರಿಣಾಮ ಸಮಸ್ಯೆ ಉಂಟಾಗುತ್ತಿರುವುದನ್ನು ಮನಗಂಡು ಹಾಸನ ರಸ್ತೆಯ ಎಡಭಾಗ ಹಾಗೂ ಬಲಭಾಗದ ಎರಡು ಚರಂಡಿಗಳಲ್ಲಿ ತುಂಬಿರುವ ಘನ ತ್ಯಾಜ್ಯವನ್ನು ತೆಗೆಸಿ ಹೊರಸಾಗಿಸಲಾಗುತ್ತಿದೆ. ಇದರಿಂದ ಹಾಸನ ರಸ್ತೆಯಲ್ಲಿ ಮಳೆ ಸುರಿಯುವ ವೇಳೆ ಉಂಟಾ ಗುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಿಸಿದಂತಾಗುತ್ತದೆ.

Advertisement

ಇದೇ ಮಾದರಿಯಲ್ಲಿ ನಗರದ ತಗ್ಗು ಪ್ರದೇಶದ ಬಡಾ ವಣೆಗಳಲ್ಲಿ ವಾಸಿಸುವ ಜನತೆ ಮಳೆಯ ಹಾನಿಯಿಂದ ಅನು ಭವಿಸುತ್ತಿರುವ ನರಕ ಯಾತನೆಗೆ ಸೂಕ್ತ ಪರಿಹಾರ ಕಲ್ಪಿಸಲು ತಾವು ನಗರಸಭೆ ಎಲ್ಲಾ ವಾರ್ಡು ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಂಡದ ಜೊತೆ ಸ್ಥಳಗಳಿಗೆ ಭೇಟಿ ಮಾಡಿ ಪರಿ ಶೀಲಿಸಿ ಸೂಕ್ತ ಪರಿಹಾರ ದೊರಕಿಸುವ ಭರವಸೆ ನೀಡಿದರು.

ಈ ವೇಳೆ ನಗರ ಸಭೆ ಸದಸ್ಯೆ ಶ್ವೇತಾ, ಬಿಜೆಪಿ ಮುಖಂಡ ರಮೇಶ್‌ ನಾಯ್ಡು ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next