Advertisement
ಸಾಮಾನ್ಯವಾಗಿ ರಾ.ಹೆ.ಯಲ್ಲಿ ದಿನ ಪೂರ್ತಿ ವಾಹನ ಸಂಚಾರ ಅಧಿಕವಿದ್ದು, ಅದರಲ್ಲಿಯೂ ಸರಕು ವಾಹನಗಳು ಬಹಳ ವೇಗವಾಗಿ ಸಂಚರಿಸುತ್ತಿರುತ್ತವೆ. ಆದರೆ ಇದೀಗ ಪಾದುವ ಸಮೀಪ ನಂತೂರು ಕಡೆಯಿಂದ ಬರುವ ವಾಹನಗಳು ತಿರುವು ಪಡೆಯುವ ಕಾರಣ ಸುರಕ್ಷೆ ದೃಷ್ಟಿಯಿಂದ ಹಂಪ್ಸ್ ಹಾಕಲಾಗಿದೆ. ಹೆದ್ದಾರಿಯಲ್ಲಿ ಅಳವಡಿ ಸಿರುವ ಅವೈಜ್ಞಾನಿಕ ಮಾದರಿಯ ಹಂಪ್ಸ್ ಗಳೇ ವಾಹನ ಸವಾರರಿಗೆ ಸಮಸ್ಯೆ ಸೃಷ್ಟಿಸುತ್ತಿವೆ.
Related Articles
Advertisement
ಈ ಹಂಪ್ಸ್‌ನಲ್ಲಿ ಸಂಚರಿಸುವ ವೇಳೆ ಕೆಲವು ವಾಹನಗಳ ಇಂಜಿನ್ ಅರ್ಧದಲ್ಲಿಯೇ ಸ್ಥಗಿತಗೊಳ್ಳುತ್ತದೆ. ಇದರಿಂದಾಗಿ ಹಿಂದುಗಡೆಯಿಂದ ಬರುವ ವಾಹನಗಳು ಮುಂದಿನ ವಾಹನಕ್ಕೆ ಢಿಕ್ಕಿ ಹೊಡೆಯುವ ಅಪಾಯವೂ ಇದೆ. ಸುತ್ತಮುತ್ತ ಶಿಕ್ಷಣ ಸಂಸ್ಥೆ ಇರುವ ಕಾರಣ, ನಂತೂರು ಕಡೆಯಿಂದ ಬರುವ ವಾಹನಗಳು ತಿರುವು ಪಡೆಯುವ ಕಾರಣ ಅಲ್ಲಿ ಹಂಪ್ಸ್ ಹಾಕುವ ಅಗತ್ಯವಿದೆ. ಆದರೆ ಹಂಪ್ಸ್‌ಗಳು ವೈಜ್ಞಾನಿಕ ರೀತಿಯಿಂದ ಕೂಡಿರಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.
ಹಂಪ್ಸ್ ಬಳಿ ಮರಳು :
ದಿನನಿತ್ಯ ಹತ್ತಾರು ಸಂಖ್ಯೆಯಲ್ಲಿ ಟ್ಯಾಂಕರ್‌ಗಳು ಇದೇ ಹೆದ್ದಾರಿ ಮುಖೇನ ಸಂಚರಿಸುತ್ತವೆೆ. ಆ ವೇಳೆ ಟ್ಯಾಂಕರ್‌ನಿಂದ ಆಯಿಲ್ ಲೀಕೇಜ್ ಆಗಿ ರಸ್ತೆಗೆ ಬಿದ್ದ ಅನೇಕ ಘಟನೆಗಳು ಈ ಭಾಗದಲ್ಲಿ ಸಂಭವಿಸಿವೆ. ಇದೇ ಕಾರಣಕ್ಕೆ ಹಂಪ್ಸ್ ಬಳಿ ಮರಳು ಹಾಕಿದ್ದಾರೆ.
ಇದು ಕೂಡ ವಾಹನ ಸ್ಕಿಡ್ ಆಗಲು ಕಾರಣವಾಗುತ್ತಿದೆ. ಹೀಗಿ ರುವಾಗ, ಜನರ ಪ್ರಾಣಕ್ಕೆ ಕುತ್ತು ತರುವ ಮಾದರಿಯ ಅಪಾಯಕಾರಿ ಹಂಪ್‌ಗ್ಳನ್ನು ಬದಲಿಸುವುದಕ್ಕೆ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಗಮನಹರಿಸಬೇಕಿದೆ.