ತಿರುವನಂತಪುರ: ಕೆಲವು ರಾಜ್ಯಗಳು ಅನಗತ್ಯ ಸರಕುಗಳನ್ನು ವಿವೇಚನೆಯಿಲ್ಲದೇ ಖರೀದಿಸು ತ್ತಿರುವುದು ಮತ್ತು ಅಂಥವುಗಳಿಗೆ ಹೆಚ್ಚು ವೆಚ್ಚ ಮಾಡುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ವಿತ್ತೀಯ ಸಾಮರ್ಥ್ಯವು ಅತ್ಯಂತ ಮಹತ್ವದ ಅಂಶವಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇರಳದ ತಿರುವ ನಂತಪುರದಲ್ಲಿ ಭಾರತೀಯ ವಿಚಾರ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾ, “ಸಾಮರ್ಥ್ಯವನ್ನು ಮೀರಿ ಖರೀದಿ ಮಾಡುವಂಥ ಚಾಳಿಯು ಸಾಕಷ್ಟು ಹೊರೆಯನ್ನು ಉಂಟುಮಾಡುತ್ತದೆ ಮತ್ತು ದೇಶದ ಹಣಕಾಸು ಪರಿಸ್ಥಿತಿಯ ಮೇಲೆ ಪ್ರತೀಕೂಲ ಪರಿಣಾಮ ಬೀರುತ್ತದೆ.
ಸಂವಿಧಾನದ ಪ್ರಕಾರ, ಕೇಂದ್ರ ಸರಕಾರವು ಈ ಕುರಿತು ರಾಜ್ಯಗಳೊಂದಿಗೆ ಚರ್ಚಿಸಿ, ಪ್ರಶ್ನೆಯೆತ್ತಬಹುದು. ಆದರೆ ಬಹುತೇಕ ಮಂದಿ ಇದನ್ನು ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪ ಎಂದು ಬಣ್ಣಿಸುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.