Advertisement
ಅಂದಹಾಗೆ ಈ ಹೋಟೆಲ್ಲಿಗೊಂದು ಪುಟ್ಟ ಇತಿಹಾಸವಿದೆ. ಇದು ಪ್ರಾರಂಭವಾಗಿದ್ದು 1952ರಲ್ಲಿ. ಆಗ ಇದರ ಹೆಸರು ರಾಜಲಕ್ಷ್ಮೀ ವಿಲಾಸ ಎಂದು. ಆಗ ಮಣ್ಣಿನ ರಸ್ತೆ ಇತ್ತಂತೆ. ಮಾಲೀಕರ ಮೂಲ ಊರು ಉಡುಪಿಯ ಸಾಲಿಗ್ರಾಮ. ಮುಂಜಾನೆ ಆರು ಗಂಟೆಗೆ ತೆರೆಯುವ ಈ ಹೋಟೆಲ್ಲಿನ ಕಾಫಿ ಕುಡಿಯಲು ಜನ ಕಾಯುತ್ತಿರುತ್ತಾರೆ. ನಿಮಗೇಕೆ ಇಲ್ಲಿನ ಕಾಫಿ ಇಷ್ಟ? ಅಂತ ಕೇಳಿದರೆ, ನೀವು ಯಾವತ್ತು ಬಂದು ಕಾಫಿ ಕುಡಿದರೂ ರುಚಿ ಬದಲಾಗುವುದಿಲ್ಲ, ಏಕೆಂದರೆ ಕಾಫಿಗೆ ಸರಿಯಾಗಿ ಡಿಕಾಕ್ಷನ್, ಹಾಲು ಸಕ್ಕರೆಗಳನ್ನೆÇÉಾ ಸರಿಯಾದ ಅಳತೆಯಲ್ಲಿ ಹಾಕಿ ಮಾಡುವವರು ಒಬ್ಬರೇ ಇರುತ್ತಾರೆ. ಇಲ್ಲಿ ಸ್ವಚ್ಚತೆಯಿದೆ. ನಾವು ಎಷ್ಟೇ ದೂರವಿದ್ದರೂ ಕಾಫಿ ಕುಡಿಯಬೇಕೆನಿಸಿದರೆ ಇಲ್ಲಿಗೇ ಬರುತ್ತೇವೆ… ಇದು ನಿತ್ಯ ಇಲ್ಲಿಯೇ ಕಾಫಿ ಕುಡಿಯವ ಗ್ರಾಹಕರ ಅಭಿಪ್ರಾಯ. ಅಂದಹಾಗೆ ಇಷ್ಟು ರುಚಿಯಾದ ಕಾಫಿಗೆ ಬೆಲೆಯೂ ಹೆಚ್ಚಿಲ್ಲ. ಕೇವಲ 10 ರುಪಾಯಿಗಳು ಮಾತ್ರ. ಇತ್ತ ಬಂದಾಗ ನೀವೊಮ್ಮೆ ಕಾಫಿ ರುಚಿನೋಡಿ.– ಶಿವು ಕೆ., ಛಾಯಾಗ್ರಾಹಕಬೆಂಗಳೂರು