Advertisement

ಅನ್‌ ಲಾಕ್‌ ; ಸನ್ನತಿ ಬೌದ್ಧ ನೆಲೆ ಪ್ರವಾಸಿಗರಿಗೆ ಮುಕ್ತ

03:46 PM Jun 27, 2021 | Team Udayavani |

ವಾಡಿ: ಕಲ್ಯಾಣ ನಾಡಿನ ಹಿರಿಮೆ, ಕ್ರಿಸ್ತಪೂರ್ವ ಮೂರನೇ ಶತಮಾನದ ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್‌ ಅಶೋಕ ಚಕ್ರವರ್ತಿ ಕಾಲಘಟ್ಟಕ್ಕೆ ಸೇರಿದ ಐತಿಹಾಸಿಕ ಬೌದ್ಧ ಸ್ತೂಪ ತಾಣ ಚಿತ್ತಾಪುರ ತಾಲೂಕಿನ ಸನ್ನತಿಗೆ ಪ್ರವಾಸಿಗರ ಆಗಮನ ಶುರುವಾಗಿದೆ.

Advertisement

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದ ಕೇಂದ್ರ ಪ್ರಾಚ್ಯವಸ್ತು ಇಲಾಖೆ, ಜೂ.16ರಿಂದ ಬುದ್ಧನ ಮೂರ್ತಿಗಳ ವೀಕ್ಷಣೆಗೆ ಮುಕ್ತ ಅವಕಾಶ ನೀಡಿದ್ದರಿಂದ ಪ್ರವಾಸಿಗರು ಸನ್ನತಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರದ ಸುಪ ರ್ದಿಯಲ್ಲಿದ್ದು, ಸೂಕ್ತ ಭದ್ರತೆಯಲ್ಲಿರುವ ಈ ಪ್ರವಾಸಿ ತಾಣಕ್ಕೆ ರಾಜ್ಯದ ಅನೇಕ ಕಡೆಗಳಿಂದ ಜನರು ಆಗಮಿಸಿ ವೀಕ್ಷಿಸುತ್ತಾರೆ.

ಇಲ್ಲಿ ಮೌರ್ಯ ಸಾಮ್ರಾಜ್ಯದ ಮಹತ್ವದ ಕುರುಹುಗಳು, ಶಿಲಾ ಶಾಸನಗಳು, ಬುದ್ಧನ ಸಾವಿರಾರು ಶಿಲಾ ಮೂರ್ತಿಗಳು, ಬೌದ್ಧ ಸ್ತೂಪ, ನಾಗಜನಾಂಗದ ಜೀವನ ಮತ್ತು ಬೌದ್ಧ ಪರಂಪರೆ ಸಾರುವ ಅಸಂಖ್ಯಾತ ಶಿಲ್ಪಕಲೆಯ ಅವಶೇಷಗಳಿವೆ. ದೇಶ-ವಿದೇಶಗಳಿಂದ ಪ್ರವಾಸಿಗರು ವೀಕ್ಷಣೆ ಮತ್ತು ಅಧ್ಯಯನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಲಾಕ್‌ ಡೌನ್‌ ತೆರವಾದ ಬಳಿಕ ಕಳೆದೊಂದು ವಾರದಿಂದ ಪ್ರವಾಸಿಗರ ಭೇಟಿಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ ಎಂದು ಇಲ್ಲಿನ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

ಸನ್ನತಿ ಗ್ರಾಮದ ಭೀಮಾ ನದಿ ದಂಡೆಯ ನೆಲದಡಿ ಪತ್ತೆಯಾಗಿರುವ ಸಾಮ್ರಾಟ್‌ ಅಶೋಕ ಚಕ್ರವರ್ತಿಯ ಆಡಳಿತ ಸ್ಮರಿಸುವ ಶಿಲೆಗಳು, ಸಾಹಿತಿಗಳ ಮತ್ತು ಸಂಶೋಧಕರ ಗಮನ ಸೆಳೆದಿವೆ. ಇಲ್ಲಿಗೆ ಬರುವ ಪ್ರವಾಸಿಗರ ಸಂಪೂರ್ಣ ಮಾಹಿತಿ ದಾಖಲಿಸಿಕೊಳ್ಳಲಾಗುತ್ತಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡೇ ಮೂರ್ತಿಗಳ ವೀಕ್ಷಣೆ ಮಾಡಲು ಸೂಚಿಸಲಾಗಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next