ಕಾಪು : ಗೋಕರ್ಣ ಸಮುದ್ರ ತೀರದಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಗುರುತು ಪತ್ತೆಗಾಗಿ ಮನವಿ ಮಾಡಲಾಗಿದೆ.
Advertisement
ಉಡುಪಿ ಮತ್ತು ಶಿರ್ವದ ಬಟ್ಟೆ ಅಂಗಡಿಯ ಚೀಲ ಹೊಂದಿರುವ ವ್ಯಕ್ತಿಯೋರ್ವರು ಗೋಕರ್ಣ ಸಮುದ್ರ ತೀರದಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಅವರ ಗುರುತು ಪತ್ತೆಗಾಗಿ ಪೊಲೀಸರು ಮಾಧ್ಯಮದ ಮೊರೆ ಹೋಗಿದ್ದು, ಸಾವಿಗೆ ಕಾರಣ ಏನೆಂದು ತಿಳಿದು ಬಂದಿಲ್ಲ.
ಇವರ ಬಗ್ಗೆ ಇನ್ನಿತರ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.