Advertisement

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ: ಭದ್ರತೆ ಹೆಚ್ಚಳ, ತನಿಖೆ ಚುರುಕು

05:35 PM Jan 14, 2023 | Team Udayavani |

ಮುಂಬಯಿ: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರ ಕಚೇರಿಗೆ ಬೆದರಿಕೆ ಕರೆಗಳು ಬಂದಿರುವುದಾಗಿ ವರದಿಯಾಗಿದೆ.

Advertisement

ಶನಿವಾರ ನಾಗ್ಪುರದಲ್ಲಿರುವ ಸಚಿವರ ಕಚೇರಿಗೆ ಅಪರಿಚಿತ ವ್ಯಕ್ತಿಯಿಂದ ಕೊಲೆ ಮಾಡುವುದಾಗಿ ಅಲ್ಲದೆ ಕಚೇರಿಯನ್ನು ಸ್ಫೋಟಿಸುವುದಾಗಿ ಮೂರು ಬಾರಿ ಕರೆಗಳು ಬಂದಿವೆ ಈ ಕುರಿತು ಸಚಿವ ಕಚೇರಿಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಸಚಿವರ ನಿವಾಸ ಹಾಗೂ ಕಚೇರಿಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಅಲ್ಲದೆ ಕೊಲೆ ಬೆದರಿಕೆ ಕರೆಯ ಕುರಿತು ಮಾತನಾಡಿದ ನಾಗ್ಪುರದ ಉಪ ಪೊಲೀಸ್ ಆಯುಕ್ತ ರಾಹುಲ್ ಮದನೆ ಮಾತನಾಡಿ ಆರೋಪಿ ಬೆಳಿಗ್ಗೆ 11:25, 11:32 ಹಾಗೂ 12:30ಕ್ಕೆ ಮೂರು ಬಾರಿ ಬೆದರಿಕೆ ಕರೆಗಳನ್ನು ಮಾಡಿರುವ ಮಾಹಿತಿ ಸಿಕ್ಕಿದ್ದು ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಸಚಿವರ ನಿವಾಸ ಹಾಗೂ ಕಚೇರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಹದಾಯಿ ಗೋವಾದ ಜೀವಾಳ… ಕೇಂದ್ರ ಮಾತ್ರ ಕರ್ನಾಟಕದತ್ತ ಒಲವು ತೋರುತ್ತಿದೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next