Advertisement

ದೂರಶಿಕ್ಷಣದಿಂದ ‘ಹೋಟೆಲ್‌ ಮ್ಯಾನೇಜ್‌ಮೆಂಟ್‌’ಹೊರಕ್ಕೆ

10:02 AM Dec 03, 2019 | Hari Prasad |

ಹೊಸದಿಲ್ಲಿ: ಇಂದಿನ ಯುವಜನರನ್ನು ಆಕರ್ಷಿಸಿರುವ ಟ್ರೆಂಡಿಂಗ್‌ ಕೋರ್ಸ್‌ಗಳಲ್ಲಿ ಒಂದಾದ ಹೊಟೇಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಅನ್ನು ದೂರಶಿಕ್ಷಣದ ಮೂಲಕ ಕಲಿಯುವ ಅವಕಾಶಕ್ಕೆ ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ) ತಡೆಯೊಡ್ಡಿದೆ. ಇದರೊಂದಿಗೆ, ಕುಲಿನರಿ ಸ್ಟಡೀಸ್‌ (ಪಾಕಶಾಸ್ತ್ರ) ಹಾಗೂ ವ್ಯಾಲ್ಯುಯೇಷನ್‌ ಆಫ್ ರಿಯಲ್‌ ಎಸ್ಟೇಟ್‌ ಕೋರ್ಸ್‌ಗಳನ್ನೂ ದೂರ ಶಿಕ್ಷಣ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ಯುಜಿಸಿ ಪ್ರಕಟಿಸಿದೆ.

Advertisement

ಆದರೆ, 2019-20ರ ಶೈಕ್ಷಣಿಕ ವರ್ಷದಲ್ಲಿ ದೂರ ಶಿಕ್ಷಣದ ಸೌಲಭ್ಯದಡಿ ಈ ಕೋರ್ಸ್‌ಗಳಿಗೆ ದಾಖಲಾತಿ ಮಾಡಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಂದುವರಿಸಬಹುದು ಎಂದು ಯುಜಿಸಿ ಸ್ಪಷ್ಟೀಕರಣ ನೀಡಿದೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next