Advertisement

ದೇಶದ ವಿವಿಧತೆಯಲ್ಲಿ ಏಕತೆ ಕಾಣಿರಿ

04:52 PM Aug 16, 2018 | |

ಇಳಕಲ್ಲ: ತ್ಯಾಗ ಮತ್ತು ಬಲಿದಾನದ ಮೂಲಕ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಹಾಗೂ ದೇಶದ ವಿವಿಧತೆಯಲ್ಲಿ ಏಕತೆ ಕಾಣಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

Advertisement

ನಗರದ ಸರಕಾರಿ ಪ್ರೌಢಶಾಲೆಯಲ್ಲಿ 72ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶ ಕಾಯುವ ಸೈನಿಕರು ಮಳೆ, ಗಾಳಿ, ಬಿಸಿಲು ಚಳಿಯನ್ನದೇ ದಿನದ 24 ಗಂಟೆಯೂ ಎಚ್ಚರಿಕೆಯಿಂದ ಅವರು ಗಡಿ ಕಾಯುತ್ತಿರುವುದರಿಂದ ಇಂದು ನಾವು ನೆಮ್ಮದಿಯಾಗಿ ನಿದ್ರೆ ಮಾಡುತ್ತಿದ್ದೇವೆ ಎಂದರು. ನಗರಸಭೆ ಕಾರ್ಯಾಲಯ: ಇಲ್ಲಿಯ ನಗರಸಭೆ ಕಾರ್ಯಾಲಯದಲ್ಲಿ ಅಧ್ಯಕ್ಷೆ ಖುರ್ಷಿದಾಬೇಗಂ ಗದ್ವಾಲ್‌ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಇಂದು ನಾವು ಸ್ವತಂತ್ರ ಭಾರತ ಹೊಂದಿದ್ದೇವೆ. ಅವರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ನಾವೆಲ್ಲ ಉಳಿಸಿ, ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದರು. ನಗರಸಭೆ ಸದಸ್ಯರು, ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯ ಮಹಾಂತೇಶ ಶಾಲೆ: ನಗರದ ಚಿತ್ತರಗಿ ವಿಜಯ ಮಹಾಂತೇಶ ಎಜ್ಯುಕೇಶನ್‌ ಸೊಸೈಟಿಯ ವಿಜಯ ಮಹಾಂತೇಶ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಶು ವಿಹಾರ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಪ್ರೌಢ ವಿಭಾಗದ ಮುಖ್ಯ ಗುರುಮಾತೆ ಆಶಾ ಮಠದ ಮಾತನಾಡಿ, ಭಾರತ ಮಾತೆಯನ್ನು ರಕ್ಷಿಸುವಲ್ಲಿ ಮಹಾತ್ಮಾ ಗಾಂಧಿಧೀಜಿ, ಸುಭಾಶಚಂದ್ರ ಬೋಸ್‌, ಬಾಲಗಂಗಾಧರ ತಿಲಕ ಇನ್ನು ಅನೇಕ ಹೋರಾಡಿದ್ದಾರೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದರು. ಸಂಘದ ಚೇರಮನ್‌ ತಿಮ್ಮಣ್ಣ ಭೋಗಾಪೂರ ಅಧ್ಯಕ್ಷತೆ ವಹಿಸಿದ್ದರು. ಸಂಗಣ್ಣ ಕಂಪ್ಲಿ, ಮಹಾಂತಪ್ಪ ವಾಲಿ, ಮಂಜುನಾಥ ಹರಿಹರ, ಶ್ರೀಕಾಂತ ಹರಿಹರ, ಶರಣಪ್ಪ ಅಕ್ಕಿ, ಗುರಣ್ಣ ಮರಟದ, ಬಸವರಾಜ ತಾಳಿಕೋಟಿ, ಬಸವರಾಜ ಮರಟದ, ಸಿದ್ದಣ್ಣ ಹರ್ತಿ, ಚನ್ನಬಸಯ್ಯ ಸಾಲಿಮಠ ಹಾಗೂ ಚಂದ್ರಶೇಖರ ಶಿವಬಲ್ಲ ಹಾಗೂ ವಿಭಾಗದ ಮುಖ್ಯ ಗುರುಗಳಾದ ಶೇಖರ ಚಾಮಲಾಪುರ, ದೇಸಾಯಪ್ಪ ಅಂಗಡಿ ಇತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next