Advertisement
ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ರವಿವಾರ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಮಾಸೋತ್ಸವದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಂಸ್ಕೃತದಲ್ಲಿಯೇ ಅನುಗ್ರಹ ಸಂದೇಶ ನೀಡಿ, ಸಂಸ್ಕೃತ ವಿಶ್ವ, ದೇವ ಭಾಷೆ, ಸರ್ವ ಭಾಷೆಗಳ ಮಾತೆಯಾಗಿದ್ದಾಳೆ. ಕನ್ನಡ, ತುಳು, ಹಿಂದಿ, ತಮಿಳು ಹೀಗೆ ರಾಷ್ಟ್ರ, ರಾಜ್ಯ, ಪ್ರಾದೇಶಿಕ ಭಾಷೆಗಳಿಗೆ ಮಾತ್ರವಲ್ಲ, ಅಂತಾರಾಷ್ಟ್ರೀಯ ಭಾಷೆಯಾಗಿರುವ ಇಂಗ್ಲಿಷ್ ಮೂಲವೂ ಸಂಸ್ಕೃತವಾಗಿದೆ. ಸಂಸ್ಕೃತ ಅಂತರ್‌ಲೋಕೀಯ ಭಾಷೆ ಹಾಗೂ ದೇವ ಭಾಷೆ. ದೇವತೆಗಳು ಮಾತನಾಡುವ ಭಾಷೆ ಎಂದು ಬಣ್ಣಿಸಿದರು. ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.
Advertisement
ವೇ| ಮೂ| ಪ್ರಭಾಕರ ಅಡಿಗ, ಹರೀಶ್ ಭಟ್ ಅವರನ್ನು ಸಮ್ಮಾನಿಸಲಾಯಿತು. ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ| ಎಚ್. ಎಸ್. ಬಲ್ಲಾಳ್, ಶಾಸಕರಾದ ಯಶ್‌ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಪಸ್ಥಿತರಿದ್ದರು. ಶ್ರೀಮಠದ ರಘೋತ್ತಮ ಆಚಾರ್ಯ ಸ್ವಾಗತಿಸಿ, ಡಾ| ಬಿ. ಗೋಪಾಲಾಚಾರ್ಯ ನಿರೂಪಿಸಿ, ವಂದಿಸಿದರು.
ರಾಜ್ಯಪಾಲರ ಶ್ರೀಕೃಷ್ಣದರ್ಶನ, ಗೀತಾ ಲೇಖನ ಯಜ್ಞ ದೀಕ್ಷೆಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಪರ್ಯಾಯ ಪುತ್ತಿಗೆ ಮಠದಿಂದ ಸ್ವಾಗತಿಸಲಾಯಿತು. ಉಭಯ ಶ್ರೀಪಾದರು ಅವರಿಗೆ ಶ್ರೀಕೃಷ್ಣ ದರ್ಶನ ಮಾಡಿಸಿದರು. ಅನಂತರ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಗೀತಾ ಮಂದಿರದಲ್ಲಿ ಆರಿಫ್ ಖಾನ್ ಅವರಿಗೆ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ನೀಡಿ ಅನುಗ್ರಹಿಸಿದರು. ಅನಂತರ ಗೀತಾಮಂದಿರದಿಂದ ವೇದಮಂತ್ರ, ವಾದ್ಯಘೋಷಗಳೊಂದಿಗೆ ರಥಬೀದಿಯಲ್ಲಿ ಮೆರವಣಿಗೆ ಬಂದು ರಾಜಾಂಗಣಕ್ಕೆ ತೆರಳಿದರು.