ಭಾರತೀಯರನ್ನೊಳಗೊಂಡಂತೆ ವಿಶ್ವದ ಎಲ್ಲ ಭಾಗದ ಜನಗಳನ್ನು ಒಂದು ಅಯಸ್ಕಾಂತದಂತೆ ಸೆಳೆಯುವ ಶಕ್ತಿ ಈ ದೇಶಕ್ಕೆ ಇದೆ ಎಂದರೇ ತಪ್ಪಾಗುವುದಿಲ್ಲ.
Advertisement
ಇದಕ್ಕೆ ನಿದರ್ಶನ ಎಂದರೇ ಅವರು ವರುಷಕ್ಕೆ ಒಮ್ಮೆ ಕೊಡುವ ವೀಸಾಗಳು. ಯಾವೊಂದು ದೇಶಕ್ಕೂ ಇಷ್ಟೊಂದು ಸಂಖ್ಯೆಯ ಆಪ್ಲಿಕೇಷನ್‌ಗಳು ಬರುವುದಿಲ್ಲ. ಅದು ಲಾಟರಿಯ ಮೂಲಕ ಆರಿಸುವ ಮಟ್ಟಿಗೆ!! ಅಮೆರಿಕ ಜಗತ್ತಿನ ಅಣ್ಣ ಎನ್ನುವುದನ್ನು ನಾವೆಲ್ಲ ಮಾಧ್ಯಮಗಳಲ್ಲಿ ಓದುತ್ತಿರುತ್ತೇವೆ. ಅದು ಅತೀ ಹೆಚ್ಚು ಮುಂದುವರಿದಿರುವ ದೇಶ, ಶ್ರೀಮಂತ ದೇಶ ಇತ್ಯಾದಿ ಇತ್ಯಾದಿ. ರಾಜಕೀಯ, ಟೆಕ್ನಾಲಾಜಿ, ಎಕನಾಮಿ ಪ್ರತಿಯೊಂದರಲ್ಲೂ ನಮ್ಮ ಯುವ ತರುಣರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
Related Articles
Advertisement
ಯಾರಾದರೂ ಐಟಿಗೆ ಸೇರಿದರೆ ಎಂದರೇ ಮುಗಿಯಿತು. ಅವನು ಪಾಸ್‌ಪೋರ್ಟ್ ರೆಡಿ ಮಾಡಿಕೊಳ್ಳಬೇಕು. ಅವನಿಗೆ ಗೊತ್ತಿಲ್ಲ ಕಂಪೆನಿಯವರು ಯಾವಾಗ ಬೇಕಾದರೂ ಅಮೆರಿಕಕ್ಕೆ ಕಳಿಸಬಹುದು. ಅದು ಸರ್ವೇಸಾಮಾನ್ಯ! ಹೋಗಿಲ್ಲ ಅಂದರೇ ಅವನಲ್ಲಿಯೇ ಏನೋ ಐಬೂ ಎಂಬಂತೆ ನಮ್ಮ ದೇಶದ ಜನ ನೋಡುತ್ತಾರೆ. ಐಟಿಯಲ್ಲಿ ಇದ್ದುಕೊಂಡು ಒಮ್ಮೆಯೂ ಅಮೆರಿಕಕ್ಕೆ ಹೋಗಿಲ್ಲವಾ…!
ಇದು ಮನಸ್ಸಿನ ವ್ಯಕ್ತಿಗತ ಸಮಸ್ಯೆಯಾ? ಅಥವಾ ಒಟ್ಟು ವ್ಯವಸ್ಥೆಯ ಸಮಸ್ಯೆಯ? ಇಷ್ಟೊಂದು ಇಷ್ಟಪಡುವ ಮಟ್ಟಿಗೆ ಇಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರೂ ಸಂತೋಷದಿಂದ ನಿಜವಾಗಿಯೂ ಇದ್ದಾರಾ? ಗೊತ್ತಾಗುವುದಿಲ್ಲ. ಯಾರು ಮನ ಬಿಚ್ಚಿ ಹೇಳಲಾರರು. ಇದೇ ಸ್ಥಿತಿ ನಮ್ಮ ದೇಶದಲ್ಲಿರುವ ಪ್ರತಿಯೊಬ್ಬ ಹಳ್ಳಿ ಮತ್ತು ಪಟ್ಟಣದಲ್ಲಿ ವಾಸಿಸುವವನ್ನಾದಾಗಿದೆ ಎಂದರೇ ಅತಿಶಯೋಕ್ತಿಯಲ್ಲ. ಹಳ್ಳಿಯಿಂದ ಪಟ್ಟಣ, ನಗರಗಳಿಗೆ ಬಂದ ಯಾರೊಬ್ಬರೂ ಏನೇ ಅಂದರೂ ಹಳ್ಳಿಗಳಿಗೆ ಪುನಃ ಮುಖ ಮಾಡುತ್ತಿಲ್ಲ. ಕಷ್ಟವೋ ಸುಖವೋ ಇಲ್ಲಿಯೇ ಬದುಕುವೆವು ಎಂದು ನಿರ್ಧರಿಸಿರುವಂತಿದೆ. ಇದೆ ಮನೋಸ್ಥಿತಿಯನ್ನು ಕಣ್ಣಿಗೆ ಕಾಣದ ದೂರದ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಮ್ಮ ನಮ್ಮ ಗೆಳೆಯರು, ನಮ್ಮ ದೇಶ ವಾಸಿಗಳದು ಆಗಿದ್ದರೇ ಅಚ್ಚರಿಯಿಲ್ಲ ಅಲ್ಲವಾ? ಯಾಕೆ ಅಷ್ಟೊಂದು ಹೈಪ್, ಮಹತ್ವವನ್ನು ನಮ್ಮ ಜನ ತಮ್ಮಲ್ಲಿಯೇ ತಿಳಿಯದೆ ಕೊಡುತ್ತಾರೋ ದೇವರೇ ಬಲ್ಲ! ಹಳ್ಳಿಯವನಿಗಿಂತ ಪಟ್ಟಣದಲ್ಲಿದ್ದವನನ್ನು, ಹೊರದೇಶದಲ್ಲಿ ಇದ್ದವನನ್ನು ನಮ್ಮ ಜನ ತುಂಬ ವ್ಯತ್ಯಾಸದಿಂದ ಕಾಣುತ್ತಾರೆ. ಅದು ಯಾವುದಕ್ಕೆ ಹಾಗೆ ಬೇರೆಯಾಗಿ ನೋಡುತ್ತಾರೋ ಅವರೆ ಯೋಚಿಸಬೇಕು. ಹೊಸ ಜಾಗದಲ್ಲಿ ಹೊಸತನದಿಂದ ಹೊಸ ವಿಚಾರಗಳನ್ನು ತಿಳಿದಿರುವನು ಎಂದು ಬೆರಗಾಗಿ ಕಂಡರೇ ಅದು ಉತ್ತಮ ಲಕ್ಷಣ. ಅದು ಬಿಟ್ಟು ಬೇರೆಯಾಗಿ ಇನ್ನೂ ಏನೇ ಅದರೂ ವಿಪರ್ಯಾಸವೇ ಸರಿ! ಇಲ್ಲಿ ಮಣ್ಣು ಹೊತ್ತಿದ್ದರೂ, ಅಲ್ಲಿ ಮಣ್ಣು ಹೊತ್ತಿದ್ದರೂ ಏನೂ ವ್ಯತ್ಯಾಸವಿಲ್ಲ. ಅಲ್ಲಿಯ ಲೈಫ್ ಸ್ಟೈಲ್ ಗೆ ತಕ್ಕನಾಗಿ ಅಲ್ಲಿ ಕೆಲಸ, ಸಂಬಳ, ವಿಚಾರ ಎಲ್ಲಾವು ಇರುತ್ತವೆ. ಅದಕ್ಕೆ ಹೆಚ್ಚು ವಿಶೇಷವನ್ನು ಕೊಡುವ ವಿಶೇಷತೆಯೆನಿಲ್ಲ. ಮನುಷ್ಯ ಹೇಗೆ ಬುದ್ಧಿವಂತಿಕೆಯಿಂದ ಅವನ ಒಟ್ಟಾರೆ ಜೀವನವನ್ನು ಸಂತೋಷದಿಂದ ಇಟ್ಟುಕೊಂಡಿದ್ದಾನೇ ಎಂಬುದೇ ಮುಖ್ಯ. ಅವನ ಒಟ್ಟಾರೆ ಜೀವನ ಅವನ ವೈಯಕ್ತಿಕ ಮತ್ತು ಅವನ ಕುಟುಂಬದ ಆರೋಗ್ಯವಂತಿಕೆಗೆ ದ್ಯೋತಕವಾಗಿರುತ್ತದೆ. ಅದು ಒಟ್ಟಾರೆ ವ್ಯವಸ್ಥೆಯ ಮತ್ತು ಆರೋಗ್ಯವಂತ ಸಮಾಜದ ಗುಟ್ಟಾಗಿರುತ್ತದೆ. ಅದು ಪ್ರತಿಯೊಬ್ಬರಲ್ಲೂ ಚಿಮ್ಮುವಂತಿರಬೇಕು. ಅದು ಬಿಟ್ಟು ವ್ಯಕ್ತಿ ಮತ್ತು ಸಮಾಜದ ನಡುವೆ ಕಂದಕದಂತಿರಬಾರದು. ಎಲ್ಲ ಸ್ತರದ ಎಲ್ಲ ಜೀವನಾಡಿಗಳು ಸಮರ್ಪಕವಾಗಿ ಕಾರ್ಯ ನಡೆಸಿದರೇ ದೇಹ ಆರೋಗ್ಯವಾಗಿರುವುದು, ಹಾಗೆಯೇ ವ್ಯವಸ್ಥೆಯು ಆರೋಗ್ಯವಾಗಿರುವುದು. ಇಲ್ಲಿ ಯಾವುದು ದೊಡ್ಡದು ಚಿಕ್ಕದು ಇಲ್ಲ. ದೊಡ್ಡದಾಗಿದೆ ಎಂದರೇ ಅದಕ್ಕೆ ಹಲವು ದಿನಗಳ ದುಡಿಮೆಯೆ ಕಾರಣವಾಗಿರುತ್ತದೆ. ಅದು ಸಮಾಜ, ಜನಗಳ ಕೈಯಲ್ಲಿಯೇ ಇರುತ್ತದೆ. ನಮ್ಮ ಜನ, ನಮ್ಮ ಜಾಗವನ್ನ ನಾವು ಪ್ರೀತಿಸದೇ ಇನ್ನು ಯಾರು ಪ್ರೀತಿಸಬೇಕು? ನಮ್ಮಮ್ಮ ಬಡವಳು ಎಂದು ನಾವು ದೂರ ಇಡುವುವೇ? ಅದು ಬಿಟ್ಟು ಇರುವುದ ಬಿಟ್ಟು ಇಲ್ಲದ ಕಡೆ ಚಿಂತಿಸುವಂತಾಗುತ್ತದೆ. ಕಣ್ ಕಣ್ ಬಿಟ್ಟು ಅಮೆರಿಕ, ಅಮೆರಿಕ ಎಂದು ಜಪಿಸುವುದನ್ನು ನಮ್ಮ ಬುದ್ಧಿವಂತ ಜನ ಕೈ ಬಿಡಬೇಕು. ಏನೇ ಆದರೂ ಹೆತ್ತ ಊರು ಯಾವುದೇ ಸ್ವರ್ಗಕ್ಕೊ ಎಂದು ಸಮನಾಗಲಾರದು.
ನಮ್ಮೊರೇ ನಮಗೆ ಶಾಶ್ವತ! *ತಿಪ್ಪೇರುದ್ರಪ್ಪ ಎಚ್. ಈ , ಮಿಯಾಮಿಸ್‌ಬರ್ಗ್