Advertisement

ಭೂ ಚಕ್ರದ ಗೆಡ್ಡೆ ಬಗ್ಗೆ ನಿಮಗೆಷ್ಟು ಗೊತ್ತು?

06:10 PM Nov 15, 2021 | Team Udayavani |

ಕುದೂರು: ಭೂಚಕ್ರ ಗೆಡ್ಡೆ ನಿಮಗೆ ಗೊತ್ತೆ ಎಂದು ಕೇಳಿದರೆ ಈ ಹೆಸರು ಕೇಳೆ ಇಲ್ಲ ಎನ್ನುವವರು ಜಾಸ್ತಿ. ಇದು ಅತ್ಯಂತ ವಿರಳವಾಗಿ ಸಿಗುವ ಗೆಡ್ಡೆ. ಬೆಟ್ಟಗುಡ್ಡಗಳ ನಡುವೆ ಸಿಗುವ ಈ ಗೆಡ್ಡೆಗೆ ಭಾರಿ ಡಿಮ್ಯಾಂಡ್‌ ಇದೆ. ಬೃಹತ್‌ ಗಾತ್ರ,  ಈ ಗೆಡ್ಡೆ ಭೂಮಿಯೊಳಗೆ 10-15 ಮೀಟರ್‌ ಆಳದಲ್ಲಿ ಸಿಗುತ್ತದೆ.

Advertisement

ಔಷಧೀಯ ಗುಣ: ಬೇರಿನ ಸುತ್ತಳತೆ ಒಂದರಿಂದ ಎರಡು ಅಡಿಯ ವರೆಗೂ ಇರಲಿದೆ. ಈ ಗೆಡ್ಡೆ ಆಯುರ್ವೇದದಲ್ಲಿ ಪ್ರಾಮುಖ್ಯತೆ ಹೊಂದಿದ್ದು ಔಷಧೀಯ ಗುಣ ಒಳಗೊಂಡಿದೆ. ಇಂತಹ ಭೂಚಕ್ರ ಗೆಡ್ಡೆ ಕುದೂರಿನ ಬೀದಿ ಬದಿಯಲ್ಲಿ ವ್ಯಾಪಾರ ಜೋರು. ಜನರು ಸಹ ಆಶ್ಚರ್ಯಚಕಿತರಾಗಿ ಏನಪ್ಪ ಇದು ಅಂತ ಕೂತೂಹಲದಿಂದ ನೋಡುತ್ತಿದ್ದರು.

ಇದನ್ನೂ ಓದಿ:- ಮಳೆ, ಚಳಿಯಿಂದ ರೈತರಿಗೆ ಸಮಸ್ಯೆಗಳ ಸಾಗರ

ಮಾರಾಟಗಾರರು ಹೇಳುವ ಪ್ರಕಾರ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡಕ್ಕೆ ಇದು ರಾಮ ಬಾಣ ಎನ್ನಲಾಗುತ್ತದೆ. ಹೀಗಾಗಿ ಜನರು ಭೂಚಕ್ರಗೆಡ್ಡೆ ಖರೀದಿಸಿ ತಿನ್ನುತ್ತಿದ್ದರು.

ವಿವಿಧ ಹೆಸರು: ಭೂಚಕ್ರ ಗೆಡ್ಡೆ ಗಿಡದ ವೈಜ್ಞಾನಿಕ ಹೆಸರು ಕ್ಯಾಪರೀಸ್‌ ಒಬ್ಲಾಂಗಿಪೋಲಿಯಾ ಅಂತ. ಭಾರತದ ಮೂಲದ ಈ ಗಿಡವನ್ನು ಸಂಸ್ಕೃತದಲ್ಲಿ ಮಧುಸ್ರವ, ಮಧುವಲ್ಲಿ, ಕನ್ನಡ ದಲ್ಲಿ ಭೂಚಕ್ರ ಗೆಡ್ಡೆ ನೀಲಸಕ್ಕರೆ ಗೆಡ್ಡೆ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಂಗ್ಲಿಷ್‌ನಲ್ಲಿ ಡೆಸರ್ಟ್‌ ಕ್ಯಾಪರ್‌ ಡೆಸರ್ಟ್‌ ಮೆರವಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

Advertisement

ದೇಶ-ವಿದೇಶಗಳಲ್ಲಿ ಬಳಕೆ: ಮೂಲ ಭಾರತವಾದರೂ ಪಾಕಿಸ್ತಾನ, ಸೌದಿಅರೇಬಿಯಾ, ಆಫ್ರಿಕಾ ದೇಶಗಳಲ್ಲಿ ಈ ಗಿಡ ಕಂಡು ಬರುತ್ತದೆ. ಕುರುಚಲು ಕಾಡುಗಳ ಮಧ್ಯೆ ಕರ್ನಾಟಕದ ಪಶ್ಚಿಮ ಘಟ್ಟಗಳು ಸೇರಿದಂತೆ ಕೇರಳ ಹಾಗೂ ಮಹಾರಾಷ್ಟ್ರದ ಬೆಟ್ಟಗುಡ್ಡಗಳ ಕುರುಚಲು ಕಾಡುಗಳಲ್ಲಿ ಬೆಳೆಯುತ್ತದೆ.ಇಂತಹ ಬೂಚಕ್ರ ಗೆಡ್ಡೆ ಸಿಗುವುದು ಅಪರೂಪ.

ಬಹುಪಯೋಗ: ಬಾಯಾರಿಕೆ ನೀಗಿಸುವುದು, ಸಕ್ಕರೆ ಕಾಯಿಲೆ, ರಕ್ತದೊತ್ತಡಕ್ಕೆ ರಾಮಬಾಣ ಅಂತ ಹೇಳಲಾಗುತ್ತದೆ. ಗ್ರಾಮಗಳಲ್ಲಿ 10 ರೂ.ಗೆ 4 ಪೀಸ್‌ ನೀಡಿದರೇ, ನಗರದಲ್ಲಿ 10 ರೂ.ಗೆ ಒಂದು ಪೀಸ್‌ ಮಾರಾಟ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next