Advertisement

Hillside: ಬೆಟ್ಟದ ಇಳಿಜಾರಿನ ವಿಶಿಷ್ಟ ಅಂಗಡಿ!

12:17 AM Aug 16, 2023 | Team Udayavani |

ಬೀಜಿಂಗ್‌: “ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯ’ ಈ ವಚನವ ನ್ನು ಕೇಳಿರುವ ಎಷ್ಟೋ ಮಂದಿಗೆ ಬೆಟ್ಟದ ಮೇಲೂ ಮನೆ ಕಟ್ಟಬಹುದೇ ಎನ್ನುವ ಆಲೋಚನೆ ಮೂಡಿ ರಬಹುದು. ಆದರೆ ಬೆಟ್ಟದ ಮೇಲಷ್ಟೇ ಅಲ್ಲ, ಬೆಟ್ಟದ ಇಳಿಜಾರಿನಲ್ಲೂ ಮನೆಯಷ್ಟೇ ಯಾಕೆ, ಅಂಗಡಿ ಯನ್ನೂ ತೆರೆಯಬಹುದು ಎಂಬುದಕ್ಕೆ ನೆರೆ ರಾಷ್ಟ್ರ ಚೀನ ಸಾಕ್ಷಿಯಾಗಿದೆ.. ಬೆಟ್ಟದ ಇಳಿಜಾರಿನ ವಿಚಿತ್ರ ಅಂಗಡಿ ಇದೀಗ ಜಾಲತಾಣದಲ್ಲಿ ಭಾರೀ ವೈ ರಲ್‌ ಆಗಿದೆ.

Advertisement

ಹೌದು ಹುನಾನ್‌ ಪ್ರಾಂತದಲ್ಲಿರುವ ಬೆಟ್ಟದ ಮೇಲೆ ಇಳಿಜಾರಿನಲ್ಲಿ ಪುಟ್ಟದೊಂದು ಮರದ ಪೆಟ್ಟಿ ಅಂಗಡಿಯನ್ನು ಕಟ್ಟಲಾಗಿದೆ. ಬೆಟ್ಟದ ಮಧ್ಯ ಇಳಿಜಾರಿನಲ್ಲಿರುವ ಈ ಅಂಗಡಿ ಭೂಮಿಯಿಂದ ಬರೋಬ್ಬರಿ 393 ಅಡಿ ಎತ್ತರದಲ್ಲಿದೆ. ಮೆಟ್ಟಿಲುಗಳಿಲ್ಲದ ಈ ಬೆಟ್ಟವನ್ನ ಚಾ ರಣ ಮಾಡುವವರು ರೋಪ್‌ ಅಥವಾ ಜಿಪ್‌ಲೈನ್‌ಗಳ ಸಹಾಯದಿಂದಲೋ ಏರಬಹುದಾಗಿದ್ದು, ಮಾರ್ಗ ಮಧ್ಯೆ ಅವರಿಗೆ ಆಹಾರ, ಪಾನೀಯ ಒದಗಿಸಲೆಂದು ಈ ಅಂಗಡಿಯನ್ನು ಸ್ಥಾಪಿ ಸಲಾಗಿದೆ.

ಇತ್ತೀಚೆಗಷ್ಟೇ ಜಾಲತಾಣ ಬಳಕೆದಾರರೊಬ್ಬರು ಈ ಅಂಗಡಿಯ ಫೋಟೋವನ್ನು ಅಪ್‌ಲೋಡ್‌ ಮಾಡಿದ್ದು, ಅದೀಗ ಭಾರೀ ವೈರಲ್‌ ಆಗಿದೆ. ಗ್ರಾಹಕರಿಗೂ ವಿಭಿನ್ನ ರೀತಿಯ ಶಾಪಿಂಗ್‌ ಎಕ್ಸ್‌ಪೀರಿಯನ್ಸ್‌ ನೀಡುವ ಅಂಗಡಿ ಅಪಾಯಕಾರಿ ಯಾಗಿ ಕಂಡರೂ, ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next