ಕುಂದಾಪುರ: ದೇವಾಲಯ ದೇವರು ಹಾಗೂ ಮನುಷ್ಯರ ನಡುವೆ ನಿಕಟ ಸಂಪರ್ಕ ಕಲ್ಪಿಸುವ ಪವಿತ್ರ ಸ್ಥಳವಾಗಿದೆ. ಕ್ರೈಸ್ತ ಸಮುದಾಯದವರಿಗೆ ದೇವಾಲಯ ಸ್ವರ್ಗದ ದಾರಿಯಾಗಿದೆ. ಪವಿತ್ರ ಸ್ಥಳವಾಗಿರುವ ದೇವಾಲಯಕ್ಕೆ ಬಂದು ಪ್ರಾರ್ಥನೆ ಮೂಲಕ ಕೃಪಾಶೀರ್ವಾದ ಬೇಡಿದಲ್ಲಿ ಎಲ್ಲರ ಬೇಡಿಕೆ ಈಡೇರುತ್ತದೆ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೆ| ಫಾ| ಡಾ| ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.ನವೀಕೃತ ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ದೇವಾಲಯ ಲೋಕಾ ರ್ಪಣೆಗೊಳಿಸಿದ ಅನಂತರ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾತ ನಾಡಿ, ಗಂಗೊಳ್ಳಿಯ ಕೊಸೆಸಾಂವ್ ಚರ್ಚ್‌ಗೆ ಉತ್ತಮ ಧರ್ಮ ಪರಂಪರೆ ಇದೆ. ಪ್ರಸ್ತುತ ಗಂಗೊಳ್ಳಿಯಲ್ಲಿ ಸುಂದರ ಚರ್ಚ್ ನಿರ್ಮಾಣ ಮಾಡುವ ಮೂಲಕ ಎಲ್ಲ ಸಮಾಜದ ಜನರು ಉತ್ತಮ ಸಂದೇಶ ಸಮಾಜಕ್ಕೆ ನೀಡಿದ್ದಾರೆ ಎಂದರು.
ಶಾಸಕ ಕೆ. ಗೋಪಾಲ ಪೂಜಾರಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಶುಭಾಶಂಸನೆಗೈದರು.ಮುಖ್ಯ ಅತಿಥಿಗಳಾದ ಗುಲ್ಬರ್ಗ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ರಾಬರ್ಟ್ ಮಿರಾಂದಾ, ಕುಂದಾ ಪುರ ವಲಯ ಪ್ರಧಾನ ಧರ್ಮ ಗುರು ವಂ| ಅನಿಲ್ ಡಿ’ಸೋಜಾ, ಶಾಸಕ ಐವನ್ ಡಿ’ಸೋಜಾ, ಚರ್ಚ್‌ನ ನಿಕಟಪೂರ್ವ ಧರ್ಮಗುರು ವಂ| ಅಲೊ#ಧೀನ್ಸ್ ಡಿ’ಲೀಮಾ ಅವರು ಶುಭ ಹಾರೈಸಿದರು.
ಬ್ಲೋಸಂ ಫೆರ್ನಾಂಡಿಸ್, ಉದ್ಯಮಿ ಎಂ.ಎಂ. ಇಬ್ರಾಹಿಂ, ಗಂಗೊಳ್ಳಿ ಗ್ರಾ.ಪಂ. ಆಡಳಿತಾಧಿಕಾರಿ ಸೀತಾರಾಮ ಶೆಟ್ಟಿ, ಕಾರ್ಮೆಲ್ ಕಾನ್ವೆಂಟ್‌ನ ಮುಖ್ಯಸ್ಥೆ ಸಿಸ್ಟರ್ ಜ್ಯೂಲಿಯಾನ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜೆರಾಲ್ಡ್ ಕ್ರಾಸ್ತಾ, ಕಾರ್ಯದರ್ಶಿ ಪ್ರೀತಿ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಇದೇ ಸಂದರ್ಭ ನೂತನ ದೇವಾ ಲಯ ನಿರ್ಮಾಣಕ್ಕೆ ಕಾರಣಕರ್ತರಾದ ಚರ್ಚ್‌ನ ಧರ್ಮಗುರು ರೆ| ಫಾ| ಅಲ್ಬರ್ಟ್ ಕ್ರಾಸ್ತಾ ಹಾಗೂ ನಿಕಟ ಪೂರ್ವ ಧರ್ಮಗುರು ರೆ| ಫಾ| ಅಲೊಧೀನ್ಸ್ ಡಿ’ಲೀಮಾ ಅವರನ್ನು ಗೌರವಿಸಲಾಯಿತು. ಚರ್ಚ್ ನಿರ್ಮಾಣಕ್ಕೆ ಸಹಾಯ ನೀಡಿದ ದಾನಿ ಗಳನ್ನು ಗೌರವಿಸಲಾಯಿತು. ಚರ್ಚ್‌ನ ಧರ್ಮಗುರು ರೆ| ಫಾ| ಆಲ್ಬರ್ಟ್ ಕ್ರಾಸ್ತಾ ಸ್ವಾಗತಿಸಿ, ಪ್ರಸ್ತಾವನೆಗೈದರು. ಓವಿನ್ ರೆಬೆಲ್ಲೊ ಮತ್ತು ಲವಿಟಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.