Advertisement

ಹೊಯ್ಸಳರ ಅಪೂರ್ವ ಕೆತ್ತನೆಯ ಗೋವಿನಿಂದನಹಳ್ಳಿಯ ಪಂಚಲಿಂಗೇಶ್ವರ

02:03 PM Aug 25, 2018 | |

ರಾಜ್ಯದ ಯಾವುದೇ ದೇವಾಲಯಗಳಲ್ಲಿ ಇಲ್ಲದಂಥ ವಿಶೇಷತೆ ಹೊಂದಿರುವ ಪಂಚಲಿಂಗೇಶ್ವರ ದೇವಾಲಯ, ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಗೋವಿಂದನಹಳ್ಳಿ ಗ್ರಾಮದಲ್ಲಿದೆ. ಇಲ್ಲಿ ಒಂದೇ ಮಾದರಿಯ ಐದು ಗರ್ಭಗುಡಿಗಳು, ಪಂಚ ಶಿವಲಿಂಗಗಳು ಮತ್ತು ಪಂಚ ನಂದಿಗಳಿವೆ. ಸಧೊÂàಜಾತೇಶ್ವರ, ವಾಮದೇವೇಶ್ವರ, ಅಘೋರೇಶ್ವರ, ತತು³ರುಶೇಶ್ವರ, ಈಶಾನ್ನೇಶ್ವರ ಎಂಬ ಪಂಚ ಲಿಂಗಗಳನ್ನು ಪ್ರತಿಷ್ಟಾಪಿಸಲಾಗಿದೆ.

Advertisement

ಕ್ರಿ.ಶ 13 ನೇ ಶತಮಾನದಲ್ಲಿ ಹೊಯ್ಸಳರ ದೊರೆ ಮೂರನೇ ನರಸಿಂಹಬಲ್ಲಾಳನಿಂದ ನಿರ್ಮಾಣವಾದ ಈ ದೇವಾಲಯ ಪೂರ್ವಾಭಿಮುಖವಾಗಿದೆ. ಉತ್ತರ ದಕ್ಷಿಣಾಭಿಮುಖವಾಗಿ 120 ಅಡಿಗಳು ಮತ್ತು ಪೂರ್ವ ಪಶ್ಚಿಮವಾಗಿ 80 ಅಡಿಗಳ ವಿಸ್ತಾರವಿದೆ. ಮೊದಲಿಗೆ ನಾಲ್ಕು ಗರ್ಭಗುಡಿಗಳನ್ನು ನಿರ್ಮಾಣ ಮಾಡಿದ್ದರಿಂದ ಎರಡನೆಯ ಮತ್ತು ಮೂರನೆ ಗರ್ಭಗುಡಿಯ ಮುಂಭಾಗದಲ್ಲಿ ಮುಖ್ಯದ್ವಾರವನ್ನು ನಿರ್ಮಾಣ ಮಾಡಲಾಗಿದೆ.

 ಈ ದ್ವಾರಗಳ ಮುಂಭಾಗವಿರುವ ಮಂಟಪದಲ್ಲಿ ಶಿವಲಿಂಗಕ್ಕೆ ಅಭಿಮುಖವಾಗಿ ನಿರ್ಮಾಣ ಮಾಡಿರುವ ನಂದಿಗಳನ್ನು ಸುಂದರವಾಗಿ ಕೆತ್ತಲಾಗಿದೆ.  ವೈಕುಂಠದ ದ್ವಾರಪಾಲಕರಾದ ಜಯ ವಿಜಯರಂತೆ ಕೈಲಾಸದ ದ್ವಾರಪಾಲಕರಾದ ನಂದಿ ಮತ್ತು ದೃತಿ, ನಾಟ್ಯಭಂಗಿಯಲ್ಲಿ, ಬಲಗೈಯಲ್ಲಿ ತ್ರಿಶೂಲ ಎಡಗೈಯಲ್ಲಿ ಗದೆಯನ್ನು ಹಿಡಿಕೊಂಡು ನಿಂತಿದ್ದಾರೆ. 

Advertisement

ದೇವಾಲಯ ಹಾಗೂ ಅದರ ಬಾಗಿಲುಗಳು ಪೂರ್ವಾಭಿಮೂಖವಾಗಿದ್ದರೂ, ಮೆಟ್ಟಿಲುಗಳನ್ನು ಮಾತ್ರ ಉತ್ತರ ಮತ್ತು ದಕ್ಷಿಣ ದಿಕ್ಕಿನ, ಕಡೆಗಳಿಂದ ನಿರ್ಮಾಣ ಮಾಡಿಲಾಗಿದೆ. 

ದೇವಾಲಯದಲ್ಲಿ ಐದು ಪ್ರತ್ಯೇಕ ವಿಮಾನ ಗೋಪುರಗಳಿವೆ.  ದೇವಾಲಯದ ಸುತ್ತಲೂ ಒಂದೇ ಸಾಲಿನಲ್ಲಿ ಕಲ್ಲಿನ ಕೆತ್ತನೆಗಳನ್ನು ಮಾಡಲಾಗಿದೆ. ಇಲ್ಲಿ ಪೌರಾಣಿಕ ಹಿನ್ನೆಲೆ ತಿಳಿಸಿಕೊಡುವ ಕೆತ್ತನೆಗಳ ಜೊತೆಗೆ ಗಣಪತಿ, ಷಣ್ಮುಖ, ಪಾರ್ವತಿ, ಮಹೇಶ್ವರ, ಭೂದೇವಿ, ಹಿರಣ್ಯಾಕ್ಷ, ನಾರಾಯಣ, ವೇಣುಗೋಪಾಲ, ವಿಷ್ಣುವಿನ ದಶಾವತಾರ, ಬ್ರಹ್ಮ, ನಾಟ್ಯಗಣಪತಿ, ವಾಲಿ, ಸುಗ್ರೀವ, ದರ್ಪಣ ಸುಂದರಿಯರು, ಗರುಡ, ಮತ್ಸé, ಕೂರ್ಮ ಮತ್ತಿತರ ವಿಗ್ರಹಗಳಿವೆ. 

ದೇವಾಲಯದ ಒಳಭಾಗ 
ದೇವಾಲಯಕ್ಕೆ ಪ್ರವೇಶಿಸುತ್ತಿದ್ದಂತೆ ನಮಗೆ ತಕ್ಷಣ ಕಾಣುವುದು ಎರಡು ಸಾಲುಗಳಲ್ಲಿ ನಿರ್ಮಾಣ ಮಾಡಿರುವ ತಲಾ 17 ರಂತೆ 34 ಕಂಬಗನ್ನೂ. ಈ ಕಂಬಗಳಲ್ಲಿ ಉತ್ತರ ದಕ್ಷಿಣವಾಗಿ ಎರಡು ಸಾಲುಗಳಲ್ಲಿ ನಿಲ್ಲಿಸಲಾಗಿದ್ದು, ಇವುಗಳ ಆಸರೆಯಲ್ಲಿಯೇ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಈ ವಠಾರದಲ್ಲಿಯೇ 17 ಕೋಷ್ಟಿಕ ಗುಡಿಗಳಿವೆ.

 ಕೊನೆಯದಾಗಿ ನಿರ್ಮಾಣ ಮಾಡಲಾಗಿದೆ ಎನ್ನಲಾದ ಈಶಾನ್ನೇಶ್ವರ ಗರ್ಭಗುಡಿಯ ಮುಂಭಾಗದಲ್ಲಿ ಇರುವ ಸುಕನಾಸಿಯಲ್ಲಿ ಪ್ರತ್ಯೇಕವಾಗಿ ನವಗ್ರಹಗಳನ್ನು ಕೆತ್ತಲಾಗಿದೆ. ಒಳ ನವರಂಗದಲ್ಲಿ ಮಂಟಪಗಳನ್ನು ನಿರ್ಮಾಣ ಮಾಡಲಾಗಿದ್ದು ಅಲ್ಲಿ ನೃತ್ಯ ಮಾಡಲಾಗುತ್ತಿತ್ತು ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.  ಅಳುಗುಳಿ ಮಣೆ ಸೇರಿದಂತೆ ವಿವಿಧ ಆಟಗಳನ್ನೂ ಆಡುತ್ತಿದ್ದರು ಎನ್ನುವುದಕ್ಕೆ ಕುರುಹುಗಳು ಇಂದಿಗೂ ಕಾಣಸಿಗುತ್ತವೆ.

ಭಿನ್ನಸುಖಾಸನಗಳು
ನಮ್ಮ ಅಂಗೈಯನ್ನು ಮುಂದೆ ಚಾಚಿದಾಗ ಕೈ ವಿಸ್ತಾರವಾಗುತ್ತದೆಯಲ್ಲ;  ಆ ರೀತಿಯಲ್ಲಿ ಗರ್ಭಗುಡಿಗಳನ್ನು ನಿರ್ಮಾಣ ಮಾಡಿದ್ದಾರೆ.  ನಮ್ಮ ಅಂಗುಲಿ (ಕೈಬೆರಳು)ಗಳಂತೆ ಶಿವ ಲಿಂಗಗಳನ್ನು ಮೊದಲನೆಯ ಶ್ರೀ ಸಧೊÂàಜಾತೇಶ್ವರ ಲಿಂಗವನ್ನು ಎತ್ತರದಲ್ಲಿ ಚಿಕ್ಕದಾಗಿ, ಗಾತ್ರದಲ್ಲಿ ದಪ್ಪವಾಗಿ ನಿರ್ಮಾಣ ಮಾಡಲಾಗಿದೆ. 

ವೈಜ್ಞಾನಿಕವಾಗಿ ನಿರ್ಮಾಣ
ದೇವಾಲಯದ ಎಲ್ಲಾ ಭಾಗಗಳನ್ನು (ಬಾಗಿಲನ್ನು ಹೊರತು ಪಡಿಸಿ) ಕಲ್ಲಿನಿಂದಲೇ ನಿರ್ಮಾಣ ಮಾಡಲಾಗಿದೆ. ವೈಜ್ಞಾನಿಕವಾಗಿ ನಿರ್ಮಾಣಮಾಡಿರುವ ದೇವಾಲಯ ಸುಮಾರು ಏಳುನೂರು ವರ್ಷಗಳನ್ನು ಪೂರೈಸಿದರೂ ಇಂದಿಗೂ ಗಟ್ಟಿಮುಟ್ಟಾಗಿದೆ. ಇಲ್ಲಿ ಕಿಟಕಿಗಳನ್ನು ಸಹ ಕಲ್ಲಿನಿಂದಲೆ ನಿರ್ಮಾಣಮಾಡಿದ್ದು ನಕ್ಷತ್ರಾಕಾರದಲ್ಲಿ ಸಣ್ಣ ಸಣ್ಣ ರಂದ್ರಗಳನ್ನು ಕೊರೆದು ಅಲ್ಲಿಂದ ಬೆಳಕು ದೇವಾಲಯದ ಒಳಭಾಗದಲ್ಲಿರುವ ಸುಂದರ ಕೆತ್ತನೆಗಳು ಮತ್ತು ದೇವರುಗಳ ಮೇಲೆ ಬೀಳುವಂತೆ ಮಾಡಿದ್ದಾರೆ. ಬೆಳಗಿನ ವೇಳೆ ಸೂರ್ಯನ ಕಿಣಗಳು ನೈರವಾಗಿ ಶಿವಲಿಂಗದ ಮೇಲೆ ಬೀಳುವ ಮನೋಹರ ದೃಶ್ಯ ಇಲ್ಲಿ ನೋಡಲು ಲಭ್ಯ. 

 ಅಪರೂಪದ ಪಂಚಲಿಂಗಳಿರುವ ಈ ದೇವಾಲಯವನ್ನು ಮುಜುರಾಯಿ ಇಲಾಖೆಯಾಗಲಿ, ,ಸ್ಥಳೀಯ ಆಡಳಿತವಾಗಲಿ ಜಗತ್ತಿಗೆ ತೋರಿಸಿಲ್ಲ.  ಚನ್ನರಾಯಪಟ್ಟಣ- ಮೈಸೂರು ಮುಖ್ಯ ರಸ್ತೆಯಿಂದ ದೇವಾಲಯಕ್ಕೆ ಬರುವ ರಸ್ತೆಯಲ್ಲಿ ಕನಿಷ್ಠ ಒಂದು ಸ್ವಾಗತ ಕಮಾನನ್ನೂ ಅಳವಡಿಸಿಲ್ಲ. 

ಮಾರ್ಗಗಳು
ಮಂಡ್ಯ ಮತ್ತು ಮೈಸೂರಿನಿಂದ ಬರುವವರು ಚಿನಕುರುಳಿ, ಕೆ.ಆರ್‌.ಪೇಟೆ ಮಾರ್ಗವಾಗಿ ಕಿಕ್ಕೇರಿ ಮತ್ತು ಗೋವಿಂದನಹಳ್ಳಿ ತಲುಪಬಹುದು. ಹಾಸನ ಅರಸೀಕೆರೆಗಳಿಂದ ಬರುವವರು ಚನ್ನರಾಯಪಟ್ಟಣ ಕಿಕ್ಕೇರಿ ಗೋವಿಂದನಹಳ್ಳಿ ಮಾರ್ಗ ಹಿಡಿಯಬೇಕು. ಹಾಗೆಯೇ, ಬೆಂಗಳೂರಿನಿಂದ ಬರುವವರು ಕುಣಿಗಲ್‌ ಮೂಲಕ ಹಿರಿಸಾವೆಗೆ ಬಂದು ಅಲ್ಲಿ ಎಡಕ್ಕೆ ತಿರುಗಿ ಶ್ರವಣಬೆಳಗಳ ಮಾರ್ಗವಾಗಿ ಕಿಕ್ಕೇರಿಯಿಂದ ಗೋವಿಂದನಹಳ್ಳಿ ತಲುಪಬೇಕು. ಯಾವುದೇ ಮಾರ್ಗದಲ್ಲಿ ಬಂದರು ಕಿಕ್ಕೇರಿ ಗ್ರಾಮದಿಂದಲೇ ತೆರಳಬೇಕು.

ಎಚ್‌.ಬಿ.ಮಂಜುನಾಥ 

Advertisement

Udayavani is now on Telegram. Click here to join our channel and stay updated with the latest news.

Next