Advertisement
ಪ್ರತೀ ಆಸ್ಪತ್ರೆಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ತಲಾ 14 ಕೋ.ರೂ. ಮೀಸಲಿರಿಸಲಾಗಿದೆ. ಆಯುಷ್ ಚಿಕಿತ್ಸಾಲಯದಲ್ಲಿ ಇಎಸ್‌ಐ ಸೌಲಭ್ಯವನ್ನೂ ಒದಗಿಸಲಾಗುತ್ತದೆ. 100 ನಗರಗಳಲ್ಲಿ ಯೋಗ ಪಾರ್ಕ್ ನಿರ್ಮಾಣವಾಗಲಿದೆ. ಮುಂದಿನ ವರ್ಷ ಮತ್ತೂ 150 ನಗರಗಳನ್ನು ಸೇರ್ಪಡೆ ಮಾಡಲಾಗುವುದು. ಸಹಭಾಗಿತ್ವ ಮತ್ತು ಸಂಶೋಧನೆಯ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಜತೆ ಒಪ್ಪಂದವನ್ನೂ ಮಾಡಲಾಗಿದೆ ಎಂದರು.
ಕೇರಳದ ಅಲೆಪ್ಪಿ ಜಿಲ್ಲೆಯ ಮೊಹಮಮ್ ಗ್ರಾಮವನ್ನು ಯೋಗ ಗ್ರಾಮವನ್ನಾಗಿ ಘೋಷಿಸಲಾಗಿದೆ. ಇಲ್ಲಿನ ಎಲ್ಲ ಮನೆಯಲ್ಲಿ ಎಲ್ಲರೂ ಯೋಗಮಾಡುತ್ತಾರೆ. ದೇಶದ ಪ್ರಪ್ರಥಮ ಯೋಗ ಗ್ರಾಮ ಇದಾಗಿದೆ ಎಂದರು. ಯೋಗ ದಿನಕ್ಕೆ ತಯಾರಿ
ಹೊಸದಿಲ್ಲಿ, ಚಂಡೀಗಢ, ಲಕ್ನೋದ ಬಳಿಕ ಈ ಬಾರಿ 4ನೇ ವರ್ಷದ ಯೋಗ ದಿನಾಚರಣೆಯು ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ನಡೆಯಲಿದೆ. ಸುಮಾರು 50 ಸಾವಿರ ಜನರ ನಿರೀಕ್ಷೆ ಇದೆ. ಯೋಗ ದಿನದಲ್ಲಿ ಎಷ್ಟು ಜನ ಭಾಗವಹಿಸಿದರೆನ್ನುವ ಕುರಿತು ದಾಖಲೀಕರಣ ನಡೆಯಲಿದೆ. ವಿವಿಧ ದೇಶಗಳಲ್ಲಿರುವ ರಾಯಭಾರ ಕಚೇರಿಗಳ ಮೂಲಕ ವಿದೇಶಗಳಲ್ಲಿ ಯೋಗದ ಮಾಹಿತಿಯನ್ನು ಪಸರಿಸಲಾಗುವುದು ಎಂದರು.
Related Articles
ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡವರು, ಸಾಮಾಜಿಕವಾಗಿ ಯೋಗವನ್ನು ಪ್ರಸಿದ್ಧಿಗೆತಂದ ಭಾರತೀಯರು ಮತ್ತು ವಿದೇಶೀಯರಿಗೆ ತಲಾ ಎರಡು ಪ್ರಧಾನ ಮಂತ್ರಿ ಪ್ರಶಸ್ತಿ ನೀಡಲು ಆಯುಷ್ ಮಂತ್ರಾಲಯ ನಿರ್ಧರಿಸಿದೆ ಎಂದರು.
Advertisement