Advertisement

Chitradurga; ರಾಜಕೀಯವೇ ಸಾಕೆನಿಸಿದೆ ಎಂದ ಕೇಂದ್ರ ಸಚಿವ ನಾರಾಯಣ ಸ್ವಾಮಿ!

10:27 PM Jan 08, 2024 | Team Udayavani |

ಚಿತ್ರದುರ್ಗ: ರಾಜಕಾರಣದಿಂದ ದೂರ ಉಳಿಯಬೇಕೆಂದಿದ್ದೇನೆ. ಭ್ರಷ್ಟ ರಾಜಕಾರಣದಲ್ಲಿ ಮುಂದುವರಿಯುವ ರಾಜಕಾರಣಿ ನಾನಲ್ಲ ಎಂದು ಕೆಲವು ದಿನಗಳ ಹಿಂದಷ್ಟೇ ಹೇಳಿದ್ದ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಅವರು, ಈಗ ಮತ್ತೊಮ್ಮೆ ರಾಜಕೀಯದ ಬಗ್ಗೆ ನಿರಾಸಕ್ತಿ ವ್ಯಕ್ತಪಡಿಸಿದ್ದಾರೆ.

Advertisement

ಸೋಮವಾರ ನಡೆದ “ದಿಶಾ’ ಸಭೆಯಲ್ಲಿ ಅಧಿಕಾರಿಯೊಬ್ಬರ ಉತ್ತರ ಕೇಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂಥದ್ದನ್ನೆಲ್ಲ ನೋಡಿಯೇ ನನಗೆ ರಾಜಕೀಯದ ಬಗ್ಗೆ ನಿರಾಸಕ್ತಿ ಬಂದಿದೆ ಎಂದರು.

ಸಂಸದರ ಆದರ್ಶ ಗ್ರಾಮಗಳ ಕುರಿತು ಸಚಿವರು ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಎಂಜಿನಿಯರ್‌ ಸಮರ್ಪಕ ಮಾಹಿತಿ ನೀಡಲಿಲ್ಲ. ಆಗ ಸಭೆಗೆ ಸರಿಯಾದ ಮಾಹಿತಿ ತರಲು ಆಗದಿದ್ದರೆ ಇಲ್ಲಿ ನಿಮ್ಮ ಅಗತ್ಯವಾದರೂ ಏನು ಎಂದು ಪ್ರಶ್ನಿಸಿದರು.

ನಿಮ್ಮ ಈ ವರ್ತನೆ ಜಿಲ್ಲಾಡಳಿತ, ಜಿಲ್ಲಾ ಧಿಕಾರಿಗಳು, ಸಚಿವರು, ಸಂಸದರನ್ನು ಜನ ಬೆರಳಿಟ್ಟು ಮಾತನಾಡುವಂತಾಗುತ್ತದೆ. 2047ಕ್ಕೆ ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ಭಾರತ ಆಗಬೇಕು ಎಂದು ಹೇಳುತ್ತಿದ್ದೇವೆ. ಆದರೆ ಇದು ಬರೀ ಪೇಪರ್‌ನಲ್ಲಿ ಮಾತ್ರ ಆಗಬಾರದು. ಇದಕ್ಕಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next