ಗುವಾಹಟಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ(ಜ.23) ಮುಂಜಾನೆ ಗುವಾಹಟಿಗೆ ಆಗಮಿಸಿದರು. ಜನವರಿ 24 ರಂದು ಅಸ್ಸಾಂನಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ನಡೆಸಲಿರುವ ಶಾ, ಈ ವರ್ಷದ ಕೊನೆಯಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಇದನ್ನೂ ಓದಿ : ಹುಣಸೋಡು ದುರಂತ: ಸಿಎಂ ಸ್ಥಳ ಪರಿಶೀಲನೆ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಬಿಎಸ್ ವೈ
ಶಾ, ಅಸ್ಸಾಂನ ಕೊಕ್ರಜಾರ್ನಲ್ಲಿ ಬೋಡೋಲ್ಯಾಂಡ್ ಪ್ರಾದೇಶಿಕ ಮಂಡಳಿಯ (ಬಿಟಿಸಿ) ಸಭೆ ನಡೆಸಲಿದ್ದು, ನಂತರ ಅವರು ನಲ್ಬರಿಯಲ್ಲಿ ಬಿಜೆಪಿ ಆಯೋಜಿಸಿರುವ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಿಜೆಪಿ ಉಪಾಧ್ಯಕ್ಷ ಮತ್ತು ಅಸ್ಸಾಂ ಪಕ್ಷದ ಉಸ್ತುವಾರಿ ಬೈಜಯಂತ್ ಜೇ ಪಾಂಡಾ ಪ್ರಸ್ತುತ ಅಸ್ಸಾಂನಲ್ಲಿ ಕ್ಯಾಂಪ್ ಮಾಡುತ್ತಿದ್ದು, ಶಾ ಅವರ ರ್ಯಾಲಿಯ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಶಾ ಇದು ತಿಂಗಳೊಳಗೆ ಎರಡನೇ ಬಾರಿಗೆ ಅಸ್ಸಾಂಗೆ ಭೇಟಿ ನೀಡುತ್ತಿದ್ದು, ಬೋಡೋಲ್ಯಾಂಡ್ ಬುಡಕಟ್ಟು ಕೌನ್ಸಿಲ್ ಪ್ರದೇಶದ ಸಭೆ ಸೇರಿದಂತೆ ಸರ್ಕಾರಿ ಕಾರ್ಯಕ್ರಮಗಳಲ್ಲದೆ, ಅವರು ರಾಜಕೀಯ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. ಹಾಗೂ ನಲ್ಬರಿಯಲ್ಲಿ ಬಿಜೆಪಿ ಆಯೋಜಿಸಿರುವ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬೈಜಯಂತ್ ಜೇ ಪಾಂಡಾ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಮಿತ್ ಶಾ ಅವರ ಕೊನೆಯ ಅಸ್ಸಾಂ ಭೇಟಿಯ ಸಂದರ್ಭದಲ್ಲಿ ಹಲವಾರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಿದ್ದರು. 126 ಮಂದಿ ಸದಸ್ಯರ ಅಸ್ಸಾಂ ಅಸೆಂಬ್ಲಿಯ ಅವಧಿ 31 ಮೇ 2021 ಕ್ಕೆ ಕೊನೆಗೊಳ್ಳುತ್ತಿದೆ.
ಇದನ್ನೂ ಓದಿ : ವೀರ ಹನುಮಂತನ ಚಿತ್ರದ ಜತೆ ಟ್ವೀಟ್… ಪ್ರಧಾನಿ ಮೋದಿಗೆ ಬ್ರೆಜಿಲ್ ಅಧ್ಯಕ್ಷ ಜೈರ್ ಧನ್ಯವಾದ