Advertisement

ಪರ್ಯಾಯ ಮೂಲದಿಂದ ತೈಲ ಆಮದು; ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸುಳಿವು

02:30 AM Mar 09, 2022 | Team Udayavani |

ಬೆಂಗಳೂರು: ರಷ್ಯಾ-ಉಕ್ರೇನ್‌ ಯುದ್ಧ ದಿಂದಾಗಿ ಭಾರತದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಪೆಟ್ರೋಲಿಯಂ ಉತ್ಪನ್ನಗಳನ್ನು ಪರ್ಯಾಯ ಮೂಲಗಳಿಂದ ಆಮದು ಮಾಡಿಕೊಳ್ಳುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ನಗರದಲ್ಲಿ ರಾಜ್ಯ ಬಿಜೆಪಿ ವತಿ ಯಿಂದ ಮಂಗಳವಾರ ಹಮ್ಮಿ ಕೊಂಡಿದ್ದ “ಆತ್ಮನಿರ್ಭರ ಅರ್ಥ  ವ್ಯವಸ್ಥೆ’ ಸಂವಾದದಲ್ಲಿ ಮಾತ ನಾಡಿದ ಅವರು, “ಯುದ್ಧ ದಿಂದಾಗಿ ಕಚ್ಚಾ ತೈಲ ದರ ಭಾರೀ ಪ್ರಮಾಣದಲ್ಲಿ ಏರಿಕೆ ಯಾಗುತ್ತಿದೆ. ಭಾರತವು ಶೇ.80ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳು ತ್ತಿದ್ದು, ದೇಶದಲ್ಲಿ ತೈಲ ದರ ಪರಿಷ್ಕರಣೆ ಬಗ್ಗೆ ಪೆಟ್ರೋ ಲಿಯಂ ಕಂಪೆನಿಗಳು ನಿರ್ಧರಿಸಲಿವೆ ಎಂದರು.

ಗೋಧಿ ಪೂರೈಕೆ ಸ್ಥಗಿತ
ಯುದ್ಧದ ಕಾರಣದಿಂದಾಗಿ ರಷ್ಯಾದಿಂದ ಗೋಧಿ ಪೂರೈಕೆ ಯಾಗುತ್ತಿಲ್ಲ. ಈ ಸವಾಲನ್ನು ನಾವು ಜಾಗತಿಕ ದೃಷ್ಟಿಕೋನದಿಂದ ಸ್ವೀಕರಿಸಬೇಕಿದೆ. ನಮಗೆ ಅಗತ್ಯ ವಿರುವಷ್ಟು ಗೋಧಿಯನ್ನು ಉತ್ಪಾದನೆ ಮಾಡಿ ಕೊಳ್ಳುವ ಜತೆಗೆ ಬೇರೆ ರಾಷ್ಟ್ರಗಳಿಗೂ ರಫ್ತು ಮಾಡು ವಷ್ಟರ ಮಟ್ಟಿಗೆ ಆತ್ಮನಿರ್ಭರತೆ ಸಾಧಿಸಬೇಕಿದೆ, ಇದನ್ನು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ಸುಮಿಯಲ್ಲಿದ್ದ ಎಲ್ಲರೂ ಸುರಕ್ಷಿತ
ಯುದ್ಧಪೀಡಿತ ಉಕ್ರೇನ್‌ನ ಸುಮಿ ನಗರದಲ್ಲಿ ಕೆಲವು ದಿನಗಳಿಂದ ಸಿಲುಕಿಕೊಂಡಿದ್ದ ಭಾರತೀಯ ವಿದ್ಯಾರ್ಥಿಗಳು ಕೊನೆಗೂ ಸುರಕ್ಷಿತ ಸ್ಥಳ ತಲುಪು ವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ಇಬ್ಬರು ಕನ್ನಡಿಗರು ಸಹಿತ ಅಲ್ಲಿದ್ದ ಎಲ್ಲ 694 ವಿದ್ಯಾರ್ಥಿ ಗಳನ್ನು ಬಸ್ಸುಗಳ ಮೂಲಕ ಪೋಲ್ಟಾವಾಗೆ ಕರೆತರಲಾಗಿದೆ. ಅಲ್ಲಿಂದ ಪಶ್ಚಿಮ ಉಕ್ರೇನ್‌ಗೆ ರೈಲಿನಲ್ಲಿ ಸಂಚರಿಸಿ, ಬಳಿಕ ವಿಮಾನದ ಮೂಲಕ ಸ್ವದೇಶಕ್ಕೆ ಆಗಮಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಯುದ್ಧ ಸ್ಥಗಿತ ಸಾಧ್ಯತೆ
ಯುದ್ಧ ಆರಂಭವಾಗಿ 13 ದಿನಗಳು ಕಳೆದರೂ ಉಕ್ರೇನ್‌ನ ಸಹಾಯಕ್ಕೆ ಬರದ ನ್ಯಾಟೋ ವಿರುದ್ಧ ಆಕ್ರೋಶ ಹೊರಹಾಕಿರುವ ಅಧ್ಯಕ್ಷ ಝೆಲೆನ್‌ಸ್ಕಿ, “ನಮಗೆ ನ್ಯಾಟೋ ಸದಸ್ಯತ್ವ ಬೇಕಾಗಿಲ್ಲ’ ಎಂದು ಘೋಷಿಸಿದ್ದಾರೆ. ಅವರ ಈ ಹೇಳಿಕೆಯಿಂದಾಗಿ ರಷ್ಯಾದ ಬೇಡಿಕೆಗೆ ಸಮ್ಮತಿ ಸಿಕ್ಕಂತಾಗಿದ್ದು, ಸದ್ಯದಲ್ಲೇ ಯುದ್ಧ ಸ್ಥಗಿತವಾಗುವ ನಿರೀಕ್ಷೆ ಮೂಡಿದೆ. ರಷ್ಯಾ ವಿರುದ್ಧ ನ್ಯಾಟೋ ಹೋರಾಡುವುದಿಲ್ಲ. ಹಾಗಾಗಿ ನಮಗೂ ನ್ಯಾಟೋ ಮೈತ್ರಿ ಅಗತ್ಯವಿಲ್ಲ ಎಂದೂ ಹೇಳಿದ್ದಾರೆ.

Advertisement

ರಷ್ಯಾ ತೈಲ ಆಮದಿಗೆ ನಿರ್ಬಂಧ
ರಷ್ಯಾದ ತೈಲ ಮತ್ತು ಗ್ಯಾಸ್‌ ಆಮದು ಮೇಲೆ ನಿಷೇಧ ಹೇರಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಆದೇಶ ಹೊರಡಿಸಿದ್ದಾರೆ. ಮಂಗಳವಾರ ರಾತ್ರಿಯಿಂದಲೇ ಇದು ಜಾರಿಗೆ ಬಂದಿದೆ. ಅಮೆರಿಕದ ಜತೆಗೆ ಬ್ರಿಟನ್‌ ಕೂಡ ರಷ್ಯಾದ ತೈಲೋತ್ಪನ್ನಗಳ ಮೇಲೆ ನಿಷೇಧ ಹೇರಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇನ್ನಷ್ಟು ಏರಿಕೆಯಾಗುವ ಸಂಭವವಿದೆ.

Advertisement

Udayavani is now on Telegram. Click here to join our channel and stay updated with the latest news.

Next