Advertisement
ಪ್ರಪಂಚದಲ್ಲಿ ಸ್ವರ್ಣ, ರಜತವನ್ನು ಹೆಚ್ಚು ಖರೀದಿಸುವ ದೇಶದಲ್ಲಿ ಭಾರತವು ಎರಡನೇ ರಾಷ್ಟ್ರವಾಗಿದೆ. 2019ರ ಜುಲೈನಲ್ಲಿ ಶೇ. 10ರಷ್ಟು ಏರಿಕೆಯಾದ ಪರಿಣಾಮ ಬೆಲೆ ಏರಿಕೆ ಕಂಡಿದೆ. ಇದನ್ನು ತರ್ಕಬದ್ಧ ಗೊಳಿಸ ಲಾಗುವುದು. ಈ ಹಿಂದೆ ಇದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆಯ ಆಸುಪಾಸಿಗೆ ನಿಗದಿತ ಬೆಲೆಯನ್ನು ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿ ಸಲಾಗಿದೆ. ಘೋಷಣೆ ಬಳಿಕ ಕಮಾಡಿಟಿ ಎಕ್ಸ್‌ಚೇಂಜ್ ನಲ್ಲಿ ಫ್ಯೂಚರ್ ಗೋಲ್ಡ್ ಶೇ.3 ಅಂದರೆ ಪ್ರತಿ ಹತ್ತು ಗ್ರಾಮ್‌ಗೆ 1,500 ರೂ. ದರ ಇಳಿಕೆಯಾಗಿದೆ.
Related Articles
ಚೀನಾದಿಂದ ಆಮದಾಗುವ ಕೆಲವು ಉಕ್ಕಿನ ಉತ್ಪನ್ನಗಳಿಗೆ ಆ್ಯಂಟಿ ಡಂಪಿಂಗ್ ಸುಂಕ ರದ್ದು ಮಾಡಲು ಚಿಂತನೆ ನಡೆಸಲಾಗಿದೆ. ಎಂಸ್‌ಎಂಇಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸದ್ಯ ಇರುವ ಶೇ.7.5ರಷ್ಟು ಇರುವ ಕಸ್ಟಮ್ಸ್ ಸುಂಕ ಇಳಿಸಲು ಸರ್ಕಾರ ನಿರ್ಧರಿಸಿದೆ. ಮುಂದಿನ ವರ್ಷದ ಮಾ.31ರ ವರೆಗೆ ಈ ವ್ಯವಸ್ಥೆ ಮುಂದುವರಿಯಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Advertisement