Advertisement

ಮುದ್ರಣ ಕಾಗದದ‌ ಶುಲ್ಕ ರದ್ದತಿಗೆ ಮನವಿ

01:22 AM Jul 11, 2019 | mahesh |

ಹೊಸದಿಲ್ಲಿ: ದಿನಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಬಳಕೆಯಾಗುವ ಮುದ್ರಣ ಕಾಗದ(ನ್ಯೂಸ್‌ಪ್ರಿಂಟ್‌)ದ ಆಮದಿನ ಮೇಲೆ ವಿಧಿಸಲಾಗಿರುವ ಶೇ.10ರಷ್ಟು ಕಸ್ಟಮ್ಸ್‌ ಶುಲ್ಕವನ್ನು ರದ್ದುಗೊಳಿಸು ವಂತೆ ಕೇಂದ್ರ ಸರಕಾರಕ್ಕೆ ಭಾರತೀಯ ವೃತ್ತಪತ್ರಿಕೆಗಳ ಸೊಸೈಟಿ (ಐಎನ್‌ಎಸ್‌) ಮನವಿ ಸಲ್ಲಿಸಿದೆ.

Advertisement

ಪತ್ರಿಕೆಗಳಿಗೆ ಆಧಾರವಾಗಿರುವ ಜಾಹೀರಾತು ಆದಾಯವು ಗಣನೀಯ ಮಟ್ಟದಲ್ಲಿ ಕುಸಿದಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ದಿನಪತ್ರಿಕೆಗಳು ಹಾಗೂ ನಿಯತ ಕಾಲಿಕೆಗಳು ಆರ್ಥಿಕ ನಷ್ಟದಲ್ಲಿವೆ. ಹೀಗಿರುವಾಗ, ಮುದ್ರಣ ಕಾಗದ ಮೇಲಿನ ಶುಲ್ಕದಿಂದಾಗಿ ವೃತ್ತಪತ್ರಿಕೆಗಳ ಉದ್ಯಮವು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಲಿವೆ ಎಂದು ಐಎನ್‌ಎಸ್‌, ತನ್ನ ಮನವಿ ಪತ್ರದಲ್ಲಿ ವಿವರಿಸಿದೆ.

ಮುದ್ರಣ ಮಾಧ್ಯಮ ರಂಗಕ್ಕೆ ವಾರ್ಷಿಕ 25 ಲಕ್ಷ ಟನ್‌ನಷ್ಟು ಮುದ್ರಣ ಕಾಗದದ ಆವಶ್ಯಕತೆಯಿದೆ. ದೇಶೀಯ ಮಟ್ಟದಲ್ಲಿ ಈ ಗುಣಮಟ್ಟದ ಕಾಗದದ ಉತ್ಪಾದನೇ ಕೇವಲ 10 ಲಕ್ಷ ಟನ್‌ನಷ್ಟಿರುವುದರಿಂದ, 15 ಲಕ್ಷ ಟನ್‌ನಷ್ಟು ಕಾಗದವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದು ಅನಿವಾರ್ಯ ವಾಗಿದೆ. ಹೀಗಾಗಿ ಈ ಕೂಡಲೇ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ, ನ್ಯೂಸ್‌ಪ್ರಿಂಟ್‌ ಮೇಲಿನ ಶುಲ್ಕ ರದ್ದು ಮಾಡಿ ಭಾರತೀಯ ಪತ್ರಿಕಾ ರಂಗವನ್ನು ಉಳಿಸಬೇಕು ಎಂದು ಕೋರಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next