Advertisement

ಕೇಂದ್ರ ಬಜೆಟ್ 2021 : ವೈಯಕ್ತಿಕ ತೆರಿಗೆದಾರರಿಗೆ ದೊಡ್ಡ ನಿರಾಶೆ !

01:50 PM Feb 01, 2021 | Team Udayavani |

ನವ ದೆಹಲಿ : ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2021 ರಲ್ಲಿ ತೆರಿಗೆ ಸ್ಲ್ಯಾಬ್‌ ನಲ್ಲಿ ಯಾವುದೇ ಬದಲಾವಣೆಗಳನ್ನು ಘೋಷಿಸಿಲ್ಲದೇ ಇರುವ ಕಾರಣದಿಂದಾಗಿ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ದೊಡ್ಡ ನಿರಾಶೆಯಾಗಿದೆ.

Advertisement

ಓದಿ : 2021 ಕೇಂದ್ರ ಬಜೆಟ್: ಈ ಬಾರಿ ಯಾವ ವಸ್ತು ಅಗ್ಗ, ಯಾವುದು ದುಬಾರಿ?

ಆದಾಗ್ಯೂ ಹಿರಿಯ ನಾಗರಿಕರಿಗೆ ಸ್ವಲ್ಪ ಪರಿಹಾರವನ್ನು ಈ ಬಜೇಟ್ ನೀಡಿದೆ. ಕೇವಲ ಪಿಂಚಣಿ ಆದಾಯ ಹೊಂದಿರುವ 75 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗುತ್ತದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.

ಇನ್ನು, ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗಳನ್ನು ಫೇಸ್ ಲೆಸ್ ಆಗಿ ಮಾಡಲು ಸರ್ಕಾರ ಪ್ರಸ್ತಾಪಿಸಿದೆ. ಇದು ರಾಷ್ಟ್ರೀಯ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ಕೇಂದ್ರವನ್ನು ಸ್ಥಾಪಿಸಲಿದೆ. ತೆರಿಗೆ ಕೇಸ್ ಗಳನ್ನು ಮತ್ತೆ ತೆರೆಯುವ ಸಮಯವನ್ನು 6 ವರ್ಷದಿಂದ 3 ವರ್ಷಕ್ಕೆ ಸರ್ಕಾರ ಕಡಿತಗೊಳಿಸಿದೆ.

ಓದಿ :  Budget ವಿಧಾನಸಭಾ ಚುನಾವಣೆ ಮೇಲೆ ಕಣ್ಣು: ಪ.ಬಂಗಾಳ, ಕೇರಳ, ತಮಿಳುನಾಡಿಗೆ ‘ರಸ್ತೆ ಭಾಗ್ಯ’

Advertisement

ಅದಲ್ಲದೇ, ಸ್ಟಾರ್ಟ್‌ ಅಪ್‌ ಗಳಿಗೆ ಟ್ಯಾಕ್ಸ್ ಹಾಲಿಡೇ ಯನ್ನು ಒಂದು ವರ್ಷ ವಿಸ್ತರಿಸಲಾಗಿದ್ದು, ಸ್ಟಾರ್ಟ್‌ ಅಪ್‌ ಗಳಲ್ಲಿನ ಹೂಡಿಕೆಯ ಮೇಲಿನ ಬಂಡವಾಳದ ಲಾಭದ ವಿನಾಯಿತಿಯನ್ನು ಸಹ ಒಂದು ವರ್ಷ ವಿಸ್ತರಿಸಲಾಗಿದೆ.

ಇನ್ನು, ಡಿಜಿಟಲ್ ಮೋಡ್‌ ಗಳ ಮೂಲಕ ತಮ್ಮ ಹೆಚ್ಚಿನ ವ್ಯವಹಾರವನ್ನು ಮಾಡುವ ಕಂಪನಿಗಳಿಗೆ ತೆರಿಗೆ ಲೆಕ್ಕಪರಿಶೋಧನೆಯ ಮಿತಿಯಿಂದ 10 ಕೋಟಿ ರೂ.ವಿನಾಯಿತಿ ಮಾಡಲಾಗಿದೆ.

ಓದಿ : ರೈತರ ಹಿತಾಸಕ್ತಿಗೆ ವಿರುದ್ಧವಾದರೆ ಕಾಯ್ದೆಹಿಂಪಡೆಯಲು ಸರ್ಕಾರ ಸಿದ್ಧ : ಕಾರಜೋಳ

Advertisement

Udayavani is now on Telegram. Click here to join our channel and stay updated with the latest news.

Next