ಬೆಂಗಳೂರು: ಕೈಗಾರಿಕಾ ಮತ್ತು ಗ್ರಾಹಕ ಉತ್ಪನ್ನಗಳ ಜಾಗತಿಕ ಮೂಲವಾದ ಝೆಟ್‌ವರ್ಕ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿಯು ಕೈಗಾರಿಕಾ ಉತ್ಪನ್ನಗಳು, ವಸ್ತು ನಿರ್ವಹಣೆ ಮತ್ತು ನವೀಕರಿಸಬಹುದಾದ ಇಂಧನ ವಿಭಾಗಗಳು ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಉತ್ಪಾದನಾ ಸೇವೆಗಳ ಕಂಪನಿಯಾದ ಯುನಿಮ್ಯಾಕ್ಟ್ಸ್ ಅನ್ನು ಸ್ವಾಧೀನಪಡಿಸಿಕೊಂಡಿದೆ.
ಝೆಟ್‌ವರ್ಕ್ ಸಂಸ್ಥೆಯ ಯುನಿಮ್ಯಾಕ್ಟ್ಸ್ ಸ್ವಾಧೀನವು ಕಂಪನಿಯನ್ನು ಇನ್ನಷ್ಟು ವಿಸ್ತರಣೆ ಮಾಡಿದೆ. ನವೀಕರಿಸಬಹುದಾದ ಇಂಧನ ತಯಾರಿಕೆಯಲ್ಲಿ ಯುನಿಮ್ಯಾಕ್ಟ್ಸ್ ಯಾಂತ್ರಿಕ ಉತ್ಪನ್ನಗಳು, ಲಾಜಿಸ್ಟಿಕ್ಸ್ ಬೆಂಬಲ, ಉತ್ಪಾದನೆಗೆ ವಿನ್ಯಾಸ, ದಾಸ್ತಾನು ನಿರ್ವಹಣೆ ಪ್ರಯೋಜನ ಪಡೆಯುತ್ತದೆ. ಝೆಟ್‌ವರ್ಕ್ ಸಂಸ್ಥೆಯು ತನ್ನ 4ನೇ ಸ್ವಾಧೀನವನ್ನು ಪೂರ್ಣಗೊಳಿಸಿದೆ.
ಯುನಿಮ್ಯಾಕ್ಟ್ಸ್‌ನಲ್ಲಿನ CEO ಆಗಿರುವ ಮ್ಯಾಥ್ಯೂ ಅರ್ನಾಲ್ಡ್, CFO ಆಗಿರುವ ಆಂಡ್ರ್ಯೂ ವೊಗ್ಲೋಮ್ ಹಾಗೆಯೇ COO ಆಗಿರುವ ಅಲನ್ ಹೇಸ್ ಇವರುಗಳನ್ನು ಒಳಗೊಂಡ ಕಾರ್ಯನಿರ್ವಾಹಕ ತಂಡವು ಯುನಿಮ್ಯಾಕ್ಟ್ಸ್‌ನಲ್ಲಿನ ತಂಡದೊಂದಿಗೆ ಝೆಟ್‌ವರ್ಕ್‌ಗೆ ಸೇರ್ಪಡೆಗೊಳ್ಳಲಿದ್ದು, ಈ ಮೂಲಕ ಜಾಗತಿಕ ಉದ್ಯೋಗಿಗಳ ಸಂಖ್ಯೆ 1,900 ಕ್ಕೆ ಏರಿದೆ.
ಯುನಿಮ್ಯಾಕ್ಟ್ಸ್‌ನ ದೃಷ್ಟಿಕೋನದಿಂದ ಈ ಸ್ವಾಧೀನವು ಕಂಪನಿಯು ಯುಎಸ್, ಯುರೋಪ್ ಮತ್ತು ಮೆಕ್ಸಿಕೊದಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಿದೆ. ಜೊತೆಗೆ ಭಾರತ ಮತ್ತು ವಿಯೆಟ್ನಾಂನಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇದರಿಂದ ಯುನಿಮ್ಯಾಕ್ಟ್ಸ್‌ನ ಗ್ರಾಹಕ ಸಂಬಂಧಗಳು, ಪೂರೈಕೆ ಪಾಲುದಾರರು ಮತ್ತು ವ್ಯಾಪಾರ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.