Advertisement

ಎರಡನೇ ಜತೆ ಸಮವಸ್ತ್ರಕ್ಕೆ 94 ಕೋಟಿ ರೂ. ಬಿಡುಗಡೆ

11:49 PM Nov 05, 2019 | Team Udayavani |

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ ಖರೀದಿಗೆ ಸರ್ವ ಶಿಕ್ಷಣ ಅಭಿಯಾನ ಅನುದಾನ ನೀಡಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. 1 ರಿಂದ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ ನೀಡಲಾಗುತ್ತದೆ. ಸುಮಾರು 37 ಲಕ್ಷ ವಿದ್ಯಾರ್ಥಿಗಳನ್ನು ಅಂದಾಜಿಸಲಾಗಿದೆ. ಪ್ರತಿ ವಿದ್ಯಾರ್ಥಿ ಸಮವಸ್ತ್ರಕ್ಕೆ 250 ರೂ.ನಿಗದಿ ಪಡಿಸಿದೆ. ಇದಕ್ಕಾಗಿ 94 ಕೋಟಿ ರೂ. ಬಿಡುಗಡೆ ಮಾಡಿದೆ.

Advertisement

ಈ ಅನುದಾನವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ)ಗಳ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಿದ್ದು, ವಿದ್ಯಾರ್ಥಿಗಳಿಗೆ ನಿಯಮಾನುಸಾರ ಸಮವಸ್ತ್ರ ನೀಡಿ ರಶೀದಿಗಳನ್ನು ನೀಡುವಂತೆ ಇಲಾಖೆ ಸೂಚಿಸಿದೆ. ಸಮವಸ್ತ್ರ ಖರೀದಿಗೂ ಮೊದಲು ಸಮಿತಿ ರಚನೆ ಮಾಡಿ ಇದರ ಅನುಮೋದನೆ ಪಡೆಯಬೇಕಿದೆ. ಸಮವಸ್ತ್ರ ಸರಬರಾಜುದಾರರು ಸತತ 3 ವರ್ಷಗಳ ಸೇವಾನುಭವ ದಾಖಲೆ ಹೊಂದಿರಬೇಕು.

ಸರಬರಾಜು ಮಾಡುವ ಸಮವಸ್ತ್ರದ ಗುಣಮಟ್ಟ ಪರಿಶೀಲಿಸಿದ ಬಗ್ಗೆ ಕೇಂದ್ರ ಸರ್ಕಾರದ ತಾಂತ್ರಿಕ ಸಮಿತಿಯಿಂದ ದೃಢೀಕೃತ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಸಮವಸ್ತ್ರದ ಗುಣಮಟ್ಟ ಪರೀಕ್ಷಿಸಲು ಜಿಲ್ಲಾ ಪಂಚಾಯತ್‌ ಸಿಇಒ ಒಳಗೊಂಡ ಸಮಿತಿ ರಚಿಸಬೇಕು. ಸಮವಸ್ತ್ರದಲ್ಲಿ ಕಳಪೆ ಗುಣಮಟ್ಟ ಕಂಡು ಬಂದರೆ ಶಾಲಾ ಮುಖ್ಯೋಪಧ್ಯಾಯರನ್ನೇ ನೇರ ಹೊಣೆಗಾರರಾಗಿ ಮಾಡಲಾಗುವುದು ಎಂಬ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next