Advertisement

ಮೈಸೂರು ದಸರಾ ಪ್ರಯುಕ್ತ ಏಕೀಕೃತ ಟಿಕೆಟ್‌ ವ್ಯವಸ್ಥೆ ಜಾರಿ

11:43 AM Sep 20, 2022 | Team Udayavani |

ಮೈಸೂರು: ನಾಡಹಬ್ಬ ಮೈಸೂರಿನ ದಸರಾ ಮಹೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಏಕೀಕೃತ ಟಿಕೆಟ್‌ (ಕಾಂಬೋ ಟಿಕೆಟ್‌) ವ್ಯವಸ್ಥೆ ಜಾರಿಗೊಳಿಸಲಾಗಿದೆ.

Advertisement

ಏಕೀಕೃತ ಟಿಕೆಟ್‌ ಪಡೆಯುವುದರಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರು ಮೈಸೂರು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ರೈಲ್ವೆ ಮ್ಯೂಸಿಯಂ ಹಾಗೂ ಕೆಆರ್‌ಎಸ್‌ ಬೃಂದಾವನಕ್ಕೆ ತೆರಳಬಹುದು. ಪ್ರವಾಸಿಗರು ಈ ಏಕೀಕೃತ ಟಿಕೆಟ್‌ ಪಡೆಯುವುದರಿಂದ ಈ 05 ಪ್ರವಾಸಿ ಸ್ಥಳಗಳಲ್ಲಿ ಟಿಕೆಟ್‌ಗಾಗಿ ಸರದಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ.

ಈ ಟಿಕೆಟ್‌ ವ್ಯವಸ್ಥೆಯು ಸೆ.20ರಿಂದ ಆರಂಭಗೊಂಡು ಅ.05ರ ವರೆಗೆ ಚಾಲ್ತಿಯಲ್ಲಿರುತ್ತದೆ. ಒಂದು ಟಿಕೆಟ್‌ ಬೆಲೆ 500 ರೂ.ಗಳಾಗಿದ್ದು, ಮಕ್ಕಳಿಗೆ ಟಿಕೆಟ್‌ ದರವನ್ನು 250 ರೂ.ಗಳಿಗೆ ನಿಗದಿಪಡಿಸಲಾಗಿದೆ.

ಏಕೀಕೃತ ಟಿಕೆಟ್‌ನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ಮಾರಾಟ ಮಾಡಲಾಗುತ್ತಿದ್ದು, ಕೆಎಸ್‌ಟಿಡಿಇ ಹೋಟೆಲ್‌ ಹಾಗೂ ಟ್ರಾವೆಲ್ಸ್‌ ವಿಭಾಗದಲ್ಲಿ,  ಕೆಎಸ್‌ಆರ್‌ಟಿಸಿ ಸಬ್‌ಅರ್ಬನ್‌ ಹಾಗೂ ನಗರ ಬಸ್‌ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣದ 02ಕಡೆ, ಚಾಮುಂಡಿ ಬೆಟ್ಟ, ಮೃಗಾಲಯ, ಕೆ.ಆರ್‌ಎಸ್‌, ಅರಮನೆ ಹಾಗೂ ಮೈಸೂರು ನಗರದ ಪ್ರಮುಖ ಹೋಟೆಲ್‌ಗ‌ಳಲ್ಲಿ ಟಿಕೆಟ್‌ ಲಭ್ಯವಿರಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next