Advertisement

ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಯುನಿಕೋರ್ಟ್‌ ದಿನ

05:40 PM Mar 22, 2023 | Team Udayavani |

ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಯುನಿಕೋರ್ಟ್‌ ದಿನವನ್ನು ಸಂಸ್ಥೆಯ ಅಧ್ಯಕ್ಷ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮಾ. 21 ರಂದು ಆಯೋಜಿಸಲಾಗಿತ್ತು.

Advertisement

ಮಂಗಳೂರಿನ ಇನ್ಫೊಟೆಕ್‌ ಸೊಲ್ಯೂಷನ್‌ನ (ಯುನಿಕೋರ್ಟ್‌ ಇಂಡಿಯಾ) ಸಹ ಸಂಸ್ಥಾಪಕ ಪ್ರಶಾಂತ್‌ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಾವು ಈಗ ಐಟಿ ಸವಾಲಿನ ಯುಗದಲ್ಲಿದ್ದು,ಆಧುನಿಕ ಸವಾಲುಗಳನ್ನು ಎದುರಿಸಲು ನಮ್ಮನ್ನು ನಾವು ಸಜ್ಜುಗೊಳಿಸಬೇಕು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸುವುದಾಗಿದ್ದು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.

ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಇಂದಿನ ಸಮಾಜದ ಸ್ಮಾರ್ಟ್‌ನೆಸ್‌ ಕುರಿತು ಮಾತನಾಡಿ ಕಂಪ್ಯೂಟರ್‌ ಜಗತ್ತಿನಲ್ಲಿ ಬಗ್ಸ್‌ ಪದವು ಬಂದ ಬಗ್ಗೆ ತಿಳಿಸಿ,ವಿದ್ಯಾರ್ಥಿಗಳು ಕಾಲೇಜು ನೀಡಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ನಾಳಿನ ಬಲಿಷ್ಠ ಸಾಧಕರಾಗಿ ಬೆಳೆಯಬೇಕು ಎಂದು ಹೇಳಿದರು. ಈ ಸಂದರ್ಭ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಯುನಿಕೋರ್ಟ್‌ ಸಂಸ್ಥೆಯೊಂದಿಗೆ ಕಾಲೇಜಿನ ಪ್ರಾಂಶುಪಾಲ ಡಾ| ತಿರುಮಲೇಶ್ವರ ಭಟ್‌ ಒಡಂಬಡಿಕೆಗೆ ಸಹಿ ಹಾಕಿದರು.

ಉಪ ಪ್ರಾಂಶುಪಾಲ ಡಾ| ಗಣೇಶ್‌ ಐತಾಳ್‌, ಪ್ಲೇಸ್‌ಮೆಂಟ್‌ ಅಧಿಕಾರಿ ಡಾ| ಸಿ.ಕೆ ಮಂಜುನಾಥ್‌, ಆಂತರಿಕ ಸಲಹಾ ಸಮಿತಿಯ ಡೀನ್‌, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಂಶುಪಾಲ ಡಾ| ತಿರುಮಲೇಶ್ವರ ಭಟ್‌ ಸ್ವಾಗತಿಸಿದರು. ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿಗಳಾದ ಪ್ರಥಮ್‌ ನಿರೂಪಿಸಿ, ಆತ್ಮಿಕಾ ವಂದಿಸಿದರು.
ಯುನಿಕೋರ್ಟ್‌ ತಂಡವು ಎಂಜಿನಿಯರಿಂಗ್‌ ಅಂಕಿಅಂಶಗಳ ಜತೆಗೆ ಡಿವೋಪ್ಸ್‌ ಇತ್ಯಾದಿ ವಿವಿಧ ವಿಷಯಗಳೊಂದಿಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ,ವಿದ್ಯಾರ್ಥಿಗಳಿಗಾಗಿ ಲ್ಯಾಬ್‌ಗಳಲ್ಲಿ ವಿವಿಧ ತರಬೇತಿಗಳನ್ನು ನೀಡಲಾಯಿತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next