ಮಹಾಲಿಂಗಪುರ: ಸಮೀಪದ ಸೈದಾಪುರ-ಸಮೀರವಾಡಿಯ ಶಿವಲಿಂಗೇಶ್ವರ ದೇವಾಲಯದಲ್ಲಿ ಪ್ರಸಕ್ತ ಸಾಲಿನ ಕಬ್ಬಿಗೆ ದರ ನಿಗದಿಗಾಗಿ ಸಮೀರವಾಡಿ ಕಬ್ಬು ಬೆಳೆಗಾರ ಸಂಘ ಮತ್ತು ಬಾಗಲಕೋಟೆ ಜಿಲ್ಲಾ ಕಬ್ಬು ಬೆಳೆಗಾರ ಸಂಘ, ರೈತ ಸಂಘದ ಸಭೆಯು ಶನಿವಾರ ಮುಂಜಾನೆ 11ರಿಂದ ಸಂಜೆ 7 ರವರೆಗೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ಅನೇಕ ರೈತರು ಹಾಗೂ ರೈತ ಸಂಘದ ಮುಖಂಡರು ಬಾಗಲಕೋಟೆ ಜಿಲ್ಲೆಯ ರನ್ನ ಶುಗರ್ಸ್ 2900, ಬೆಳಗಾವಿ ಜಿಲ್ಲೆಯ ಕಾಗವಾಡ ಶಿರಗುಂಪಿ ಕಾರ್ಖಾನೆಯವರು 2850 , ಬೆಳಗಾವಿ ಜಿಲ್ಲೆಯ ಬೆಡಕಿಹಾಳ ವೆಂಕಟೇಶ್ವರ ಕಾರ್ಖಾನೆ 2900, ನಿಪ್ಪಾಣಿ ಹಾಲಸಿದ್ದನಾಥ ಕಾರ್ಖಾನೆಯವರು 2950 ರಂತೆ ದರ ಘೋಷಿಸಿ, ಈಗಾಗಲೇ ಕಾರ್ಖಾನೆ ಪ್ರಾರಂಭಿಸಿದ್ದಾರೆ. ಅವರು ನೀಡಿದಂತೆ ಸಮೀರವಾಡಿ ಸಕ್ಕರೆ ಕಾರ್ಖಾನೆಯವರು ಸಹ 2900 ರೂಗಳ ದರ ಘೋಷಿಸಿ ಕಾರ್ಖಾನೆ ಪ್ರಾರಂಭಿಸಬೇಕೆಂದು ಸಭೆಯಲ್ಲಿ ಪಟ್ಟು ಹಿಡಿದರು.
ಸಮೀರವಾಡಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ ಮಾತನಾಡಿ, ರೈತರ ಅಭಿವೃದ್ಧಿಗಾಗಿ ಮತ್ತು ಸೇವೆಗಾಗಿಯೇ ಸಂಘಟನೆ ಇರುವುದು, ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ಪಡೆಯುವತನಕ ತಮ್ಮ ಸಹಕಾರ ಹೀಗೆಯೇ ಮುಂದುವರಿಯಲಿ. ಕಬ್ಬು ಬೆಳೆಗಾರರ ಸಂಘವೂ ಸಹ ಸದಾ ತಮ್ಮ ಬೆನ್ನಿಗೆ ಇದೆ ಸೌಹಾರ್ದ ನೆಲೆಯಲ್ಲಿ ಸಮಸ್ಯೆ ಬಗೆ ಹರಿಸೋಣ ಎಂದರು.
ಸಮೀರವಾಡಿ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ರಂಗನಗೌಡ ಪಾಟೀಲ ಮಾತನಾಡಿ, ಕಾರ್ಖಾನೆಗಳು ರೈತ ಬೆಳೆದ ಕಬ್ಬ ಟನ್‌ಗೆ 4 ರಿಂದ 5 ಸಾವಿರ ನಿಗದಿ ಮಾಡಿದರೂ ಕಡಿಮೆಯೇ. ರೈತರ ಹಿತ ದೃಷ್ಟಿಯನ್ನು ಪರಿಗಣಿಸಿ, ಈ ಮುಂಚೆ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ಸುಮಾರು 500 ಜನ ರೈತರ ಒಪ್ಪಿಗೆಯಂತೆ 2022-23ನೇ ಸಾಲಿಗೆ ಪ್ರತಿ ಟನ್ ಕಬ್ಬಿಗೆ 2800 ರೂಗಳು ಹಾಗೂ ಕಳೆದ ವರ್ಷದ ಎರಡನೇ ಕಂತಿನ 62 ರೂಗಳಿಗೆ ಒಪ್ಪಿಗೊಂಡಿದ್ದೇವೆ. ಇದೊಂದು ಬಾರಿ ಇದೇ ದರ ಪಡೆಯೋಣ, ಇದರಲ್ಲಿ ನಮ್ಮ ಯಾವುದೇ ಲಾಭಿ ಇಲ್ಲ ಎಂದರು.
Related Articles
ಸಭೆ ಸೋಮವಾರಕ್ಕೆ ಮುಂದೂಡಿಕೆ
ಶನಿವಾರ ಮುಂಜಾನೆ 11 ರಿಂದ ಸಂಜೆ 7 ವರೆಗೆ ಸಭೆ ನಡೆದರೂ ಸಹ ಸಮೀರವಾಡಿ ಕಬ್ಬು ಬೆಳೆಗಾರರು ಮತ್ತು ರೈತ ಸಂಘ, ಬಾಗಲಕೋಟೆ ಕಬ್ಬು ಬೆಳಗಾರ ಸಂಘದ ಮಧ್ಯೆ ಒಮ್ಮತ ಮೂಡದ ಕಾರಣ, ಸಭೆಯನ್ನು ನ.7ರ ಸೋಮವಾರಕ್ಕೆ ಮುಂದೂಡಲಾಯಿತು.
ಸಭೆಯಲ್ಲಿ ರೈತ ಮುಖಂಡರಾದ ಸಂಗಪ್ಪ ನಾಗರಡ್ಡಿ ಮುತ್ತಪ್ಪ ಕೋಮಾರ, ಸುಭಾಸ ಶಿರಬೂರ, ಶ್ರೀಕಾಂತ್ ಗೂಳನ್ನವರ, ಮಹಾಲಿಂಗಪ್ಪ ಸನದಿ, ಪ್ರಕಾಶ ಚನ್ನಾಳ, ಈರಪ್ಪ ಹಂಚಿನಾಳ, ಉದಯ ಸಾರವಾಡ, ಗಂಗಾಧರ ಮೇಟಿ, ಬಸವಂತಪ್ಪ ಕಾಂಬಳೆ, ಸುನ್ನಪ್ಪ ಪೂಜಾರಿ, ಬಿ.ಜಿ ಹೊಸೂರ, ಶ್ರೀಶೈಲ ಬೂಮಾರ, ಭೀಮಶಿ ಕರಿಗೌಡರ, ಬಸನಗೌಡ ಪಾಟೀಲ್, ಮಹಾದೇವ ಮಾರಾಪೂರ, ಚಿದಾನಂದ ಅಂಗಡಿ, ಲಕ್ಕಪ್ಪ ಪಾಟೀಲ್, ಬಂದು ಪಕಾಲಿ, ರಮೇಶ ಕುಲಕರ್ಣಿ, ರಾಮಣ್ಣ ಮಳಲಿ, ಮಹಾದೇವ ನಾಡಗೌಡ, ಬಸವಣ್ಣೆಪ್ಪ ಬ್ಯಾಳಿ, ಮಲ್ಲಪ್ಪ ಬಾಯಪ್ಪಗೋಳ, ಶಿವನಗೌಡ ಪಾಟೀಲ್, ಮಲ್ಲಪ್ಪ ಗುರವ, ವೆಂಕಪ್ಪ ಗಿಡ್ಡಪ್ಪನ್ನವರ, ರಮೇಶ ಮೇಟಿ, ಸದಾಶಿವ ಕಂಬಳಿ, ಪ್ರಕಾಶ ಕೋಳಿಗುಡ್ಡ, ಸದಾಶಿವ ಗೊಬ್ಬರದ, ಬಸವರಾಜ ಮಳಲಿ, ಪಿಯೂಷ್ ಓಸ್ವಾಲ, ಮಹಾಲಿಂಗಪ್ಪ ಇಟ್ನಾಳ, ರಾಮಪ್ಪ ಹಟ್ಟಿ, ಯಲ್ಲಪ್ಪ ಉಪ್ಪಾರ ಸೇರಿದಂತೆ ರೈತ ಸಂಘ ಮತ್ತು ಕಬ್ಬು ಬೆಳೆಗಾರರ ಸಂಘದ ಸಾವಿರಾರು ರೈತರು ಸಭೆಯಲ್ಲಿ ಭಾಗವಹಿಸಿದ್ದರು.