ಉಳ್ಳಾಲ: ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲದಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು, ಉಳ್ಳಾಲ ಸೀಗ್ರೌಂಡ್‌ನಲ್ಲಿ 20ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿದ್ದು, ಬಟ್ಟಪ್ಪಾಡಿಯಲ್ಲಿ ಭೂ ಪ್ರದೇಶ ಸಮುದ್ರ ಪಾಲಾಗುತ್ತಿದೆ.
ಕಡಲ್ಕೊರೆತಕ್ಕೆ ಸಂಬಂಧಿಸಿ ಸೀಗ್ರೌಂಡ್ ಬಳಿಯ ಕಿಲೇರಿಯಾ ನಗರದ ವರೆಗೆ ಶಾಶ್ವತ ಮತ್ತು ತಾತ್ಕಾಲಿಕ ಕಾಮಗಾರಿ ನಡೆದಿದ್ದು ಸೀಗ್ರೌಂಡ್‌ನ ಸುಮಾರು 500 ಮೀಟರ್ ಕಾಮಗಾರಿ ಬಾಕಿ ಉಳಿದ ಕಾರಣ ಸೀಗ್ರೌಂಡ್‌ನಲ್ಲಿ ಸಮುದ್ರ ಕೊರೆತ ಹೆಚ್ಚಾಗಿದೆ.
ಮನೆಯ ಕಾಂಪೌಂಡ್ ಗೋಡೆಗಳು ಸಮುದ್ರ ಪಾಲಾಗುತ್ತಿವೆ. ಮನೆಗಳು ಅಪಾಯದಲ್ಲಿವೆ. ಶಾಸಕ ಯು.ಟಿ. ಖಾದರ್ ಸೀಗ್ರೌಂಡ್‌ಗೆ ಭೇಟಿ ನೀಡಿ ಅಪಾಯದಂಚಿನ ಪ್ರದೇಶಗಳಿಗೆ ತುರ್ತಾಗಿ ಕಲ್ಲು ಹಾಕುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಬಂದರು ಸಚಿವ ಅಂಗಾರ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸ್ಥಳೀಯ ಸಮಸ್ಯೆಗಳ ಕುರಿತು ಗಮನ ಸೆಳೆದಿದ್ದಾರೆ.