Advertisement

ಅಮೆರಿಕ : 20 ಮಿಲಿಯನ್‌ ಉದ್ಯೋಗ ನಷ್ಟ

02:51 PM May 09, 2020 | sudhir |

ನ್ಯೂಯಾರ್ಕ್‌: ಕೋವಿಡ್ ಕಾರಣದಿಂದ ಅಮೆರಿಕದಲ್ಲಿ ಸುಮಾರು 20 ಮಿಲಿಯನ್‌ ನಿರುದ್ಯೋಗಿಗಳು ಸೃಷ್ಟಿಯಾಗಿದ್ದಾರೆ. ಅಮೆರಿಕದ ಇತಿಹಾಸದಲ್ಲೇ ಎಂದೂ ಕಾಣದಂಥ ಆರ್ಥಿಕ ಸಂಕಷ್ಟವನ್ನು ಕೊರೊನಾ ತಂದೊಡ್ಡಿದೆ. ಇದರ ಪರಿಣಾಮವಾಗಿ ಹಲವು ಉದ್ಯಮಗಳು, ಕಂಪೆನಿಗಳು ಬಾಗಿಲು ಹಾಕಿದ್ದು, ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ.

Advertisement

ಅಮೆರಿಕದ ಕಾರ್ಮಿಕ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ, ಪ್ರಸ್ತು ಶೇ. 14.7 ಕ್ಕೆ ಏರಿದೆ. ಮಾರ್ಚ್‌ ಆರಂಭದಲ್ಲಿ ಈ ಪ್ರಮಾಣ ಕೇವಲ ಶೇ. 4.4 ರಷ್ಟಿತ್ತು. ಫೆಬ್ರವರಿ ತಿಂಗಳಿನಲ್ಲಿ ಶೇ. 3.5 ರಷ್ಟಿತ್ತು. ಈ ಹೊತ್ತಿನಲ್ಲೇ ಕೋವಿಡ್ ಸೋಂಕು ಹರಡತೊಡಗಿ ಲಾಕ್‌ಡೌನ್‌ ಜಾರಿಗೊಳಿಸಬೇಕಾಯಿತು ಎಂದು ವಿವರಿಸಿದೆ. ಕಳೆದ ದಶಕದಲ್ಲಿ ಸೃಷ್ಟಿಸಿದ ಉದ್ಯೋಗವೆಲ್ಲಾ ಕೇವಲ ಎರಡೇ ತಿಂಗಳಿನಲ್ಲಿ ಕೋವಿಡ್ ನಿಂದ ನಾಶವಾಗಿವೆ. 1933 ರಲ್ಲಿ ನಿರುದ್ಯೋಗ ಪ್ರಮಾಣ ಶೇ. 25 ರಷ್ಟಿತ್ತು ಎಂದಿರುವ ಇಲಾಖೆಯು, ಮುಂದಿನ ಪರಿಣಾಮವನ್ನು ಊಹಿಸಲಾಗದು ಎಂದಿದೆ. 1982 ರಲ್ಲಿ ಹಲವು ಕಾರಣಗಳಿಂದ ನಿರುದ್ಯೋಗ ಪ್ರಮಾಣ ಶೇ. 10.8 ಕ್ಕೆ ಏರಿತ್ತು. ಎರಡನೇ ವಿಶ್ವ ಮಹಾಯುದ್ಧದ ಸಂದರ್ಭ, 1945 ರ ಸೆಪ್ಟೆಂಬರ್‌ನಲ್ಲಿ ಅಂಥ ಸಂದರ್ಭದಲ್ಲಿ ಒಂದು ತಿಂಗಳಿನ‌ಲ್ಲಿ ಸುಮಾರು 2 ಮಿಲಿಯನ್‌ ಉದ್ಯೋಗ ನಷ್ಟವಾಗಿತ್ತು. 2009 ರ ಎಪ್ರಿಲ್‌ನಲ್ಲಿ ಆರ್ಥಿಕ ಹಿಂಜರಿತದ ಕಾರಣದಿಂದ 8 ಮಿಲಿಯನ್‌ ಉದ್ಯೋಗಗಳು ನಷ್ಟವಾಗಿದ್ದವು. ಈ ಬಾರಿ ಆರ್ಥಿಕತೆಯ ಎಲ್ಲ ವಲಯಗಳಲ್ಲೂ ಉದ್ಯೋಗ ನಷ್ಟವಾಗಿದೆ. ಅಥಿತ್ಯೋದ್ಯಮದಲ್ಲಿ ಸುಮಾರು 7.7 ಮಿಲಿಯನ್‌ ಉದ್ಯೋಗ ನಷ್ಟವಾಗಿದ್ದರೆ, ಶಿಕ್ಷಣ-ಆರೋಗ್ಯ ವಲಯದಲ್ಲಿ 2.5 ಮಿಲಿಯನ್‌, ಚಿಲ್ಲರೆ ವ್ಯಾಪಾರ ಉದ್ಯಮ ವಲಯ 2.1 ಮಿಲಿಯನ್‌, ಉತ್ಪಾದನಾ ಕ್ಷೇತ್ರದಲ್ಲಿ 1.3 ಮಿಲಿಯನ್‌ ನಷ್ಟು ಉದ್ಯೋಗ ನಷ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next