Advertisement

ಯುವ ಕಾಂಗ್ರೆಸ್‌ನಿಂದ ನಿರುದ್ಯೋಗ ದಿನಾಚರಣೆ

06:28 PM Sep 18, 2021 | Team Udayavani |

ಯಾದಗಿರಿ: ನಗರದ ಸುಭಾಶ್ಚಂದ್ರ ಬೋಸ್‌ ವೃತ್ತದಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು, ಬಾಳೆಹಣ್ಣು ಮಾರುವ ಮುಖಾಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನವನ್ನು ನಿರುದ್ಯೋಗ ದಿನವನ್ನಾಗಿ ಆಚರಿಸಿದರು.

Advertisement

ಇದೇ ವೇಳೆ ಮಾಜಿ ವಿಧಾನ ಪರಿಷತ್‌ ಸದಸ್ಯ ಚೆನ್ನಾರೆಡ್ಡಿಗೌಡ ತುನ್ನೂರು ಮಾತನಾಡಿ, ವರ್ಷಕ್ಕೆ 2 ಕೋಟಿ ಉದ್ಯೋಗದ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈಗಾಗಲೇ 7 ವರ್ಷಗಳ ಅಧಿಕಾರ ನಡೆಸಿ ಯುವಕರಿಗೆ ಯಾವುದೇ ಉದ್ಯೋಗ ನೀಡದಿರುವುದು ಯುವಕರನ್ನು ನಿರುದ್ಯೋಗಿಗಳನ್ನಾಗಿಸಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಕಾರ್ಯದರ್ಶಿ ಅಬ್ದುಲ್‌ ರಜಾಕ್‌ ಮತ್ತು ಬಸ್ಸುಗೌಡ ಬಿಳಾರ, ಎನ್‌ಎಸ್‌ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜೀಯಕುಮಾರ ಕಾವಲಿ,ಜಿಲ್ಲಾ ಪ್ರಧಾನಕಾರ್ಯದರ್ಶಿ ದಾವೂದ್‌ ಪಠಾಣ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಾಘವೇಂದ್ರ ಸಾಹುಕಾರ, ಅವಿನಾಶ ಜಗನ್ನಾಥ, ಪ್ರಭಾಕರ್‌ ಯರಗೋಳ, ಶಹಾಪುರ ಬ್ಲಾಕ್‌ ಅಧ್ಯಕ್ಷರಾದ ಮೌನೇಶ ನಾಟೇಕಾರ, ನಿರಂಜನ್‌ ರಾಠೊಡ, ಆಕಾಶ್‌ ಠಾಣಗುಂದಿ, ಮಲ್ಲು, ನಿಂಗು, ಅಶೋಕ, ಬಸವರಾಜ, ಹಣಮಂತ, ಅಜೀಮ್‌ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next